ಮತ್ತೊಂದು ನರಭಕ್ಷಕ ಚಿರತೆ ಸೆರೆ, ಕೊಲ್ಲುವಂತೆ ಗ್ರಾಮಸ್ಥರ ಒತ್ತಾಯ, ನಿರಾಕರಿಸಿದ ಅಧಿಕಾರಿಗಳು
ಜನವರಿ 26, 2023
ನಾಗೇಂದ್ರ ಕುಮಾರ್, ಟಿ.ನರಸೀಫುರ ತಿ.ನರಸೀಪುರ: ತಾಲೂಕಿನ ಸೋಸಲೆ ಹೋಬಳಿಯಲ್ಲಿ ನಾಲ್ಕು ಜನರ ಪ್ರಾಣಹಾನಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಂದು ಮುಂಜಾನೆ ನೆರೆಗ್ಯಾತನಹಳ್ಳಿ ಗ್ರಾಮದ ಸತ್ಯಪ್ಪ ಅವರ ತೋಟದ ಬಳಿ ಇಟ್ಟಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಚಿರತೆಯನ್ನು ನೋಡಲು ಜನಜಂಗುಳಿಯೇ ಸೇರಿತ್ತು. ಅರಣ್ಯ ಅಧಿಕಾರಿಗಳು ಚಿರತೆಯನ್ನು ಬೇರೆಡೆ ಸಾಗಿಸಲು ಪ್ರಯತ್ನ ಪಟ್ಟಾಗ ಗ್ರಾಮಸ್ಥರು ತಡೆದು ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಒತ್ತಾಯಿಸಿ ಚಿರತೆ ವಾಹನವನ್ನು ಸುತ್ತುವರೆದು ಅಡ್ಡ ಮಲಗಿ ಪ್ರತಿಭಟಿಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಸೆರೆಸಿಕ್ಕ ಚಿರತೆಯನ್ನು ಕೊಲ್ಲಲಾಗುವುದಿಲ್ಲ. ಬೇರೆಡೆ ಸಾಗಿಸಲು ಅವಕಾಶ ನೀಡುವಂತೆ ಉಪವಿಭಾಗಾಧಿಕಾರಿ ಕಮಲಬಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದ ಮೇರೆಗೆ ಗ್ರಾಮಸ್ಥರು ಒಪ್ಪಿದರು. ಡಿಸಿಎಫ್ ಬಸವರಾಜು, ಮಹೇಶ್ ಕುಮಾರ್, ಎಸಿಎಫ್ ಲಕ್ಷೀಕಾಂತ್, ಎಎಸ್ಪಿ ಡಾ.ನಂದಿನಿ, ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಆನಂದ್, ಲೋಲಾಕ್ಷಿ, ಪಿಎಸ್ಐ ತಿರುಮಲ್ಲೇಶ್ ಇತರರು ಹಾಜರಿದ್ದರು.
0 ಕಾಮೆಂಟ್‌ಗಳು