ಕಲ್ಲು ತುಂಬಿದ ಲಾರಿ ಪಲ್ಟಿ: ಚಾಲಕ ಪಾರು

ಶಾರುಕ್‌ ಖಾನ್‌, ಹನೂರು
ಹನೂರು : ಪಟ್ಟಣದ ಹೊರ ವಲಯದ ಹುಣಿಸೆ ಗುಡ್ಡೆ ಬಳಿ ಶನಿವಾರ ಬೆಳ್ಳಂ ಬೆಳಗ್ಗೆ ಕಲ್ಲು ತುಂಬಿದ ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ.
ಕರಿಕಲ್ಲು ತುಂಬಿಕೊಂಡು ತಮಿಳುನಾಡಿಗೆ ಹೋರಟಿದ್ದ ಈ ಲಾರಿ ಪಲ್ಟಿಆದ ಬಳಿಕ ಸಂಪೂರ್ಣ ನಜ್ಜುಗುಜ್ಜಾಗಿದೆ. ಸದ್ಯ ಚಾಲಕ ಅಪಾಯದಿಂದ ಪಾರಾಗಿದ್ದು ಈತನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು