ಹಿರಿಯ ಸಮಾಜವಾದಿ ಪ.ಮಲ್ಲೇಶ್ ಹೃದಯಾಘಾತದಿಂದ ನಿಧನ

ಮೈಸೂರು: ಹಿರಿಯ ಸಮಾಜವಾದಿ, ಹೋರಾಟಗಾರ ಪ.ಮಲ್ಲೇಶ್ (85)  ಹೃದಯಾಘಾತದಿಂದ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ತಮ್ಮ ನಿವಾಸ ರಾಮಕೃಷ್ಣ ನಗರದಲ್ಲಿ ಇಂದು ಮಧ್ಯಾಹ್ನ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ನಗರದ ಅಪೋಲೋ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಾಗಲೇ ಅವರು ನಿಧನರಾಗಿರುವ ವಿಚಾರವನ್ನು ವೈದ್ಯರು ದೃಢಪಡಿಸಿದ್ದಾರೆ.
ಪ.ಮಲ್ಲೇಶ್ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತರಾಗಿದ್ದರು. ಇವರು ಸಮಾಜದಲ್ಲಿನ ಅಸಮಾನತೆ, ಕೋಮುವಾದ,  ಭ್ರμÁ್ಟಚಾರದ ವಿರುದ್ಧ ಬೆಂಕಿ ಚೆಂಡಿನಂತೆ  ಗುಡುಗುತ್ತಿದ್ದರು.
ಮೈಸೂರಿನಲ್ಲಿ ನಡೆಯುವ ಯಾವುದೇ ಪ್ರಗತಿಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರ ನಿಧನ ಹೋರಾಟಗಾರರು, ಸ್ನೇಹಿತರು ಮತ್ತು ಪ್ರಗತಿಪರರಿಗೆ ದಿಗ್ಬ್ರಮೆ ಉಂಟು ಮಾಡಿದೆ.
ಮೈಸೂರಿನಲ್ಲಿ ಜನಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಬೇಕೆಂದು  ಕೆಲವು ಪ್ರಗತಿಪರರು, ಮೈಸೂರು ವಿವಿ ಸಂಶೋಧರಕರ ವಿದ್ಯಾರ್ಥಿಗಳ ತಂಡ ಗುರುವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಅವರ ನಿವಾಸಕ್ಕೆ ಹೋಗಿ ನಾಳೆ ಜಲದರ್ಶಿನಿಯಲ್ಲಿ ಆಯೋಜಿಸಿರುವ ಪೂರ್ವಭಾವಿ ಸಭೆಗೆ ಆಗಮಿಸಬೇಕು ಎಂದು ಆಹ್ವಾನ ನೀಡಿ ಕೆಲವು ಸಮಯ ಮಾತುಕತೆ ನಡೆಸಿ ಬಂದಿದ್ದರು.
ಆದರೆ ಮಧ್ಯಾಹ್ನಾ 2.30 ಗಂಟೆ ಸಮಯದಲ್ಲಿ ಅವರ ಸಾವು ಎಲ್ಲರಲ್ಲೂ ಆತಂಕ ಮತ್ತು ದುಖಃ ವನ್ನುಂಟು ಮಾಡಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು