ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ : ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ೧೧೪ ಜೋಡಿಗಳು
ಜನವರಿ 19, 2023
ಮೈಸೂರು: ಶ್ರೀ
ಸುತ್ತೂರು ಕ್ಷೇತ್ರದಲ್ಲಿ ಶ್ರೀ ಮತ್ಸುತ್ತೂರು ಜಗದ್ಗುರು
ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ
ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ನೆರವೇರಿತು.
ಶ್ರೀ
ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಸಚ್ಚಿದಾನಂದ ಸರಸ್ವತೀ
ಸ್ವಾಮಿಗಳು, ಡಾ. ಶ್ರೀ ಚಂದ್ರಶೇಖರ
ಶಿವಾಚಾರ್ಯ ಸ್ವಾಮಿಗಳು, ಸಹಕಾರ ಹಾಗೂ ಮೈಸೂರು ಜಿಲ್ಲಾ
ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್,
ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್,
ಶಾಸಕರಾದ ಎಸ್.ಎ.ರಾಮದಾಸ್
ಸೇರಿದಂತೆ ಅನೇಕ ಗಣ್ಯರು, ಮುಖಂಡರು
ಉಪಸ್ಥಿತರಿದ್ದರು.
ಸಾಮೂಹಿಕ
ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಲ್ಲಾ ಜಾತಿ, ಧರ್ಮದ 114 ಜೋಡಿಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್
ಅವರು ಪ್ರತಿಜ್ಞಾವಿಧಿ ಬೋಧಿಸಿ, ವಧುವರರಿಗೆ ಆಶೀರ್ವದಿಸಿದರು.
0 ಕಾಮೆಂಟ್‌ಗಳು