ಪ.ಮಲ್ಲೇಶ್ ನಿಧನಕ್ಕೆ ಪ್ರೊ. ಬಿ.ಕೆ.ಚಂದ್ರಶೇಖರೇಗೌಡ ಸಂತಾಪ

ಮೈಸೂರು: ಇಂದು ಮದ್ಯಾಹ್ನ ನಿಧನರಾದ ಹಿರಿಯ ಸಮಾಜವಾದಿ, ಹೋರಾಟಗಾರ ಪ.ಮಲ್ಲೇಶ್ ನಿಧನಕ್ಕೆ ಅವರ ಅಂತರಂಗದ ಶಿಷ್ಯ ಎನಿಸಿಕೊಂಡಿರುವ ಮೈಸೂರು ಡಿ.ಬನುಮಯ್ಯ ಕಾಲೇಜಿನ ನಿವೃತ್ತ ಪ್ರೊ. ಬಿ.ಕೆ.ಚಂದ್ರಶೇಖರೇಗೌಡ ಸಂತಾಪ ಸೂಚಿಸಿದ್ದಾರೆ.
ಅಪ್ಪಟ ಗಾಂಧಿವಾದಿಯಾಗಿದ್ದ ಪ.ಮಲ್ಲೇಶ್ ಕ್ರಮೇಶ ಲೋಹಿಯಾ ವಾದಕ್ಕೆ ಮರಳಿ ಸಮಾಜವಾದಿಯಾದರು. ಗ್ರಾಮೀಣ ಪ್ರದೇಶದ ಯುವಕರಿಗೆ ಪ್ರಶ್ನಿಸುವ, ಮಾತನಾಡುವ ಎದೆಗಾರಿಕೆಯನ್ನು ಕಲಿಸಿದ ಪ.ಮಲ್ಲೇಶ್ ಅವರು, ಸಮಾಜದಲ್ಲಿನ ಅಸಮಾನತೆ, ಕೋಮುವಾದ, ಭ್ರμÁ್ಟಚಾರವನ್ನು ಸಹಿಸುತ್ತಿರಲಿಲ್ಲ. ಅಸಮಾನತೆ ವಿರುದ್ಧ ಸದಾ ಹೋರಾಟ ಮಾಡುತ್ತಿದ್ದರು. ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ಅವರ ಮಾನವ ಪತ್ರಿಕೆ ಪ.ಮಲ್ಲೇಶ್ ಅವರ ಮಯೂರ ಪ್ರೆಸ್‍ನಲ್ಲಿ ಅಚ್ಚಾಗುತ್ತಿತ್ತು. ಅಂದು ನಾವು ಹುಡುಗರಾಗಿದ್ದ ಕಾಲದಲ್ಲಿ ನಮ್ಮಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರೇ ಪ.ಮಲ್ಲೇಶ್ ಅವರು ಎಂದು ಚಂದ್ರಶೇಖರೇಗೌಡ ಬಣ್ಣಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು