ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ 3ನೇ ಬಲಿ: 60 ವರ್ಷದ ವೃದ್ಧೆಯನ್ನು ಎಳೆದೊಯ್ದು ಕೊಂದು ಹಾಕಿದ ನರಭಕ್ಷಕ
ಜನವರಿ 20, 2023
ನಾಗೇಂದ್ರ ಕುಮಾರ್, ಟಿ.ನರಸೀಪುರ
ತಿ.ನರಸೀಪುರ : ತಾಲ್ಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ 60 ವರ್ಷದ ಮಹಿಳೆ ಚಿರತೆ ದಾಳಿಗೆ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಮನೆಯ ಹೊರಗಡೆ ಇದ್ದ ಸೌದೆಯನ್ನು ಎತ್ತಿಕೊಳ್ಳಲು ಬಂದಿದ್ದ ವೇಳೆ ಚಿರತೆ ಸಿದ್ದಮ್ಮ ಅವರ ಮೇಲೆ ದಾಳಿ ನಡೆಸಿ ಎಳೆದೊಯ್ದಿದೆ ಎನ್ನಲಾಗಿದೆ. ಈ ವೇಳೆ ಗ್ರಾಮಸ್ಥರು ಕಿರುಚಾಡಿದ ಬೆನ್ನಲ್ಲೇ ಮಹಿಳೆಯ ಕುತ್ತಿಗೆ ರಕ್ತ ಹೀರಿ ಓಡಿ ಹೋಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೃತ ಸಿದ್ದಮ್ಮ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಡೆದು ಒಂದು ಗಂಟೆಯಾದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಆಗಮಿಸದ ಕಾರಣ ಗ್ರಾಮಸ್ಥರು ಕುಪಿತಗೊಂಡಿದ್ದರು. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಸಿದ್ದಮ್ಮ ಅವರ ಮೃತದೇಹ ಕಳಿಸಲಾಗಿದೆ.
0 ಕಾಮೆಂಟ್‌ಗಳು