ಪ.ಮಲ್ಲೇಶ್ ನಿಧನಕ್ಕೆ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಸಂತಾಪ
ಜನವರಿ 19, 2023
ಮೈಸೂರು : ಹಿರಿಯ ಸಮಾಜವಾದಿ ಪ.ಮಲ್ಲೇಶ್ ನಿಧನಕ್ಕೆ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಸಂತಾಪ ಸೂಚಿಸಿದೆ. ಪ.ಮಲ್ಲೇಶ್ ನಾಡು ಕಂಡ, ಶ್ರೇಷ್ಠ ಸಾಮಾಜಿಕ ಚಿಂತಕ, ಛಲಗಾರ, ಚಳವಳಿಗಳ ದೊಡ್ಡ ಶಕ್ತಿಯಾಗಿದ್ದರು. ಸಾವಿರಾರು ಯುವಕೆ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರು. ಪ್ರಶ್ನಿಸುವ ಶಕ್ತಿಯನ್ನು ಹುಟ್ಟುಹಾಕಿದವರು. ಶ್ರೀಯುತರ ನಿಧನದಿಂದ ನೋವಾಗಿದೆ ಎಂದು ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
0 ಕಾಮೆಂಟ್‌ಗಳು