ಪ.ಮಲೇಶ್ ನಿಧನದಿಂದ ಜನಪರ ಹೋರಾಟಕ್ಕೆ ತುಂಬಾಲಾರದ ನಷ್ಟ : ಕರ್ನಾಟಕ ರಾಜ್ಯ ರೈತಸಂಘ

ಮೈಸೂರು : ನಾಡಿನ ಹಿರಿಯ ಸಮಾಜವಾದಿ, ನಿಷ್ಠೂರವಾದಿ, ಜನಪರ ಚಿಂತಕ ಹಾಗೂ ಹೋರಾಟಗಾರ ಪ. ಮಲ್ಲೇಶ್ ಅವರ ನಿಧನದಿಂದ
ಜನಪರ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್, ಸಂಘಟನೆ ಕಾರ್ಯದರ್ಶಿ ದರ್ಶನ್ ಪುಟ್ಟಣ್ಣಯ್ಯ, ಮುಖಂಡರಾದ ಎನ್.ಪ್ರಸನ್ನಗೌಡ, ಎಸ್.ಸಿ.ಮಧುಚಂದನ್,
ಬಸವರಾಜ್ ಅವರುಗಳು ಸಂತಾಪ ಸೂಚಿಸಿದ್ದಾರೆ.
ಗಾಂಧಿ ಮತ್ತು ರಾಮ ಮನೋಹರ ಲೋಹಿಯಾ ಅವರ ವಿಚಾರಗಳಿಂದ ಪ್ರಭಾವಿತರಾಗಿ ಅನ್ಯಾಯ ಕಂಡಲ್ಲಿ ಸಿಡಿದೇಳುತ್ತಿದ್ದ ಪ. ಮಲ್ಲೇಶ್ ಅವರು ಮೈಸೂರಿನ ಎಲ್ಲಾ ಜನಪರ ಹೋರಾಟಗಳಿಗೆ ಒತ್ತಾಸೆಯಾಗಿದ್ದರು. ಇವರ ಸಾವು ಅತ್ಯಂತ ನೋವು ಉಂಟುಮಾಡಿದೆ ಎಂದು ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು