ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ದಾರುಣ ಸಾವು

ಮಂಡ್ಯ: ನಗರದ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಬೆಂಗಳೂರಿನಿಂದ ಕಾಚಿಗೂಡ ರೈಲಿನಲ್ಲಿ ಮಂಡ್ಯಕ್ಕೆ ಬಂದಿಳಿದ ಇಬ್ಬರು ಮಹಿಳೆಯರು ರೈಲ್ವೆ ಗೇಟ್‌ ಬಳಿ ಮೈಸೂರಿನಿಂದ ಬರುತ್ತಿದ್ದ ಮೈಲಾಡುತೊರೈ ರೈಲು ಬರುತ್ತಿರುವುದು ಗಮನಿಸದೆ ತರಾತುರಿಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದಾರೆ.
ಇಬ್ಬರು ಮಹಿಳೆಯರಿಗೆ ಸುಮಾರು 35 ಮತ್ತು 50 ವರ್ಷವಾಗಿರಬಹುದು ಎನ್ನಲಾಗಿದೆ. ಮೃತರು ಮಂಡ್ಯ ತಾಲ್ಲೂಕು ಶಿವಳ್ಳಿ ಗ್ರಾಮದ ತಾಯಿ, ಮಗಳು ಎಂದು ಹೇಳುತ್ತಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ರೈಲ್ವೆ ಪೋಲಿಸರು ಬಂದು ಮೃತರ ಬ್ಯಾಗ್ ಗಳನ್ನು
ಪರಿಶೀಲಿಸಿ ವಿಳಾದ ಹುಡುಕಾಟ ನಡೆಸಿ ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು