ರೈತಸಂಘದ ಪ್ರಭಲ ಮುಖಂಡ ಸಮಿಉಲ್ಲಾ ನೇತೃತ್ವದಲ್ಲಿ ನೂರಾರು ಮುಸ್ಲಿಂ ನಾಯಕರು ಜೆಡಿಎಸ್ ಸೇರ್ಪಡೆ

 

ಪಾಂಡವಪುರ : ತಾಲ್ಲೂಕು ರೈತ ಸಂಘದ ಪ್ರಭಲ ಮುಸ್ಲಿಂ ಮುಖಂಡ ಎಲೆಕೆರೆ ಸಮಿಉಲ್ಲಾ ತಮ್ಮ ನೂರಾರು ಬೆಂಬಲಿಗರೊಂದಿಗೆ ಶಾಸಕ ಸಿ.ಎಸ್.ಪುಟ್ಟರಾಜು ಸಮ್ಮುಖದಲ್ಲಿ ಜಾತ್ಯತೀತ ಜನತಾದಳ ಪಕ್ಷ ಸೇರ್ಪಡೆಯಾದರು.
ಇಂದು ಬೆಳಿಗ್ಗೆ 
ಪಾಂಡವಪುರದ ಸಮಿಉಲ್ಲಾ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಹೆಸರಾಂತ ಧರ್ಮಗುರು ಮುಫ್ತಿ ಮೌಲಾನ ಉಮರ್ ಖಾದ್ರಿ, ಏಜಾಸ್ ಪಾಷ, ರಹಮಾನ್ ಸಾಬ್, ಕಲೀಂ, ರಫೀಕ್, ಆಬಿದ್, ಮುಸ್ತಫಾ, ಸೈಯದ್ ಹಮೀದ್, ವೀರಪ್ಪನ್ ಬಾಬು, ಅಝೀಜ್ ಪಾಷ, ಕಲೀಂ, ನಸ್ರುಲ್ಲಾ, ಮುಮ್ತಾಜ್ ಸೇರಿದಂತೆ ನೂರಾರು ಮುಖಂಡರು ಜೆಡಿಎಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸಮಿಉಲ್ಲಾ ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಕೊಡುಗೆ ಅಪಾರವಾಗಿದೆ. ಶಾಸಕರು ಕ್ಷೇತ್ರದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುತುವರ್ಜಿ ವಹಿಸಿದ್ದಾರೆ. ಇವರ ಪ್ರಗತಿಪರ ಕಾರ್ಯಗಳನ್ನು ಮೆಚ್ಚಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ರಚನೆಗೆ ಅನುಕೂಲವಾಗಲು ಜೆಡಿಎಸ್ ಸೇರಿರುವುದಾಗಿ ಹೇಳಿದರು.   
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಟೌನ್ ಚಂದ್ರು, ಪುರಸಭೆ ಸದಸ್ಯರಾದ ಚಂದ್ರು, ಹಾರೋಹಳ್ಳಿ ಕೃಷ್ಣ, ಇಮ್ರಾನ್ ಮುಖಂಡರಾದ ಆದರ್ಶ, ಮನು, ಹರೀಶ, ಇಷರತ್, ಹಾಜಿ, ವಾಹಿದ್ ಮತ್ತಿತರರು ಇದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು