ಹೋರಾಟಗಾರ ಪ.ಮಲ್ಲೇಶ್ ನಿಧನಕ್ಕೆ ಎಸ್‍ಡಿಪಿಐ ಸಂತಾಪ


ಬೆಂಗಳೂರು : ಹಿರಿಯ ಸಮಾಜವಾದಿ, ಹೋರಾಟಗಾರ ಪ.ಮಲ್ಲೇಶ್ ನಿಧನಕ್ಕೆ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂತಾಪ ಸೂಚಿಸಿದ್ದಾರೆ.
ಅಪ್ಪಟ ಸಮಾಜವಾದಿಯಾಗಿದ್ದ ಪ.ಮಲ್ಲೇಶ್ ಅವರ ನಿಧನದಿಂದ ಹೋರಾಟಗಾರರಿಗೆ ತುಂಬಲಾರದ ನಷ್ಟವಾಗಿದೆ. ಸಮಾಜದಲ್ಲಿನ ಕೋಮುವಾದ, ಭಷ್ಟಾಚಾರವನ್ನು ಪ,ಮಲ್ಲೇಶ್ ಎಂದಿಗೂ ಸಹಿಸುತ್ತಿರಲಿಲ್ಲ. ಅಸಮಾನತೆ ವಿರುದ್ಧ ಸದಾ ಹೋರಾಟ ಮಾಡುತ್ತಿದ್ದರು. ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಪ.ಮಲ್ಲೇಶ್ ಅವರ ಹೋರಾಟವನ್ನು ಮುಂದುವರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮ್ಜದ್ ಖಾನ್ ಸಂತಾಪ: ಹೋರಾಟಗಾರ ಪ.ಮಲ್ಲೇಶ್ ನಿಧನಕ್ಕೆ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಸಂತಾಪ ಸೂಚಿಸಿದ್ದಾರೆ.
ಪ.ಮಲ್ಲೇಶ್ ನಾಡು ಕಂಡ, ಶ್ರೇಷ್ಠ ಸಾಮಾಜಿಕ ಚಿಂತಕ, ಛಲಗಾರ, ಚಳವಳಿಗಳ ದೊಡ್ಡ ಶಕ್ತಿಯಾಗಿದ್ದರು. ಸಾವಿರಾರು ಯುವಕರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರು. ಪ್ರಶ್ನಿಸುವ ಶಕ್ತಿಯನ್ನು ಹುಟ್ಟುಹಾಕಿದವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು