ಶ್ರೀ ಮಲೆ ಮಾದೇಶ್ವರನ ಹುಂಡಿಯಲ್ಲಿ 2.52 ಕೋಟಿ ನಗದು, 72 ಗ್ರಾಂ ಚಿನ್ನ, 3,100 ಕೆಜಿ ಬೆಳ್ಳಿ ಸಂಗ್ರಹ

 ಸಂಗ್ರಹ ಚಿತ್ರ
ವರದಿ-ಶಾರುಕ್ ಖಾನ್, ಹನೂರು
ಹನೂರು : ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಬಿದ್ದ ಹಣ, ಚಿನ್ನ, ಬೆಳ್ಳಿ ಮುಂತಾದವುಗಳ ಎಣಿಕೆ ನಡೆದಿದ್ದು, ಈ ಬಾರಿ 42 ದಿನದಲ್ಲಿ ಬರೋಬ್ಬರಿ 2,52,55,599 ರೂ. ನಗದು, 72 ಗ್ರಾಂ ಚಿನ್ನ, 3.100 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ. 
ಕಳೆದ ಡಿಸೆಂಬರ್ 7 ರಿಂದ ಜನವರಿ 17 ರ 42 ದಿನಗಳ ಅವಧಿಯ ಹುಂಡಿಯಲ್ಲಿ ದೊರೆತ ಕಾಣಿಕೆ ಇದಾಗಿರುತ್ತೆ ಎಂದು ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ತಿಳಿಸಿದ್ದಾರೆ. ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಾಟೀಲ್ ಇದ್ದರು
.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು