ಗ್ರಾಮ ಲೆಕ್ಕಿಗನಿಂದ ಸರ್ಕಾರಕ್ಕೆ ವಂಚನೆ ಆರೋಪ : ದೂರು

ತಿ.ನರಸೀಪುರ : ತಾಲ್ಲೂಕಿನ ಮೂಗೂರು ಹೋಬಳಿ, ಮಾಡ್ರಹಳ್ಳಿ ಗ್ರಾಮದ ಗ್ರಾಮ ಲೆಕ್ಕಿಗರೊಬ್ಬರು ರೈತರಿಂದ ಕಂದಾಯ ಪಡೆದು ಸರ್ಕಾರಿ ದಾಖಲೆಯಲ್ಲಿ ಕಡಿಮೆ ಹಣ ನಮೂದಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಲ್ಲದೇ ರೈತರಿಗೂ ಮೋಸ ಮಾಡಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಗರದ ಬಿ.ಎನ್.ನಾಗೇಂದ್ರ ಅವರು, ಗ್ರಾಮ ಲೆಕ್ಕಿಗ ಅಂಥೋಣಿ ರಾಜ್ ಸುನಿಲ್ ಎಂಬುವವರ ವಿರುದ್ಧ ದೂರು ನೀಡಿದ್ದು, ಮಾಡ್ರಳ್ಳಿ ಗ್ರಾಮದ ಸರ್ವೆ ನಂ: 74/1, 74/3, 81/2, 23 ಹಾಗೂ 180/1 ರ ಜಮೀನುಗಳಿಗೆ ಭೂ ಮಾಲೀಕರು ಭೂ ಕಂದಾಯವನ್ನು ಪಾವತಿ ಮಾಡಿದ್ದು, ಭೂ ಮಾಲೀಕರಿಗೆ ನೀಡಿದ ರಸೀದಿ ಮತ್ತು ಸರ್ಕಾರಕ್ಕೆ ಲೆಕ್ಕ ನೀಡಿದ ರಶೀದಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇದರಿಂದ ರೈತರಿಗೂ ಹಾಗೂ ಸರ್ಕಾರಕ್ಕೆ ಬಹಳ ನಷ್ಟವನ್ನುಂಟು ಮಾಡಿರುತ್ತಾರೆ. ಈತನ ವಿರುದ್ಧ ವಿಚಾರಣೆ ನಡೆಸಿ 
ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು