ಜಗದೀಶ್ ಗೌಡ ನೇತೃತ್ವದಲ್ಲಿ ಹೂಟಗಳ್ಳಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ, ಭರ್ಜರಿ ಪ್ರಚಾರ

ಮೈಸೂರು : ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಹೂಟಗಳ್ಳಿ ಗ್ರಾಮದಲ್ಲಿ ನಾಗನಹಳ್ಳಿ ಜಗದೀಶ್‍ಗೌಡ ನೇತ್ಬೃತ್ಜೆವದಲ್ಲಿ ಬಿಜೆಪಿ  ಕಾರ್ಯಕರ್ತರು ಭರ್ಜರಿಯಾಗಿ ವಿಜಯ ಸಂಕಲ್ಪ ಅಭಿಯಾನ ನಡೆಸಿ ಪಕ್ಷದ ಪರ ಪ್ರಚಾರ ನಡೆಸಿದರು.
ಈ ವೇಳೆ ಕ್ಷೇತದ ಬಿಜೆಪಿ ಹಿರಿಯ ಮುಖಂಡ ನಾಗನಹಳ್ಳಿ ಜಗದೀಶ್ ಗೌಡ ಅವರು ಕಾರ್ಯಕರ್ತರ ಜತೆಗೂಡಿ ಗ್ರಾಮದ ಮನೆ, ಮನೆಗಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಕರಪತ್ರಗಳನ್ನು ಹಂಚಿ ಮತದಾರರಿಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯಾರ ವಾಣಿಶ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷರಾದ
 ಹೇಮಂತ್ ಕುಮಾರ್, ಹೂಟಗಳ್ಳಿ ದೇವರಾಜ್, ಕಾರ್ಯಕಾರಣಿ ಸದಸ್ಯ ರಾಜಕುಮಾರ್, ನಾಗರಾಜ್, ರೈತ ಮೋರ್ಚಾ ಉಪಾಧ್ಯಕ್ಷ ವಿನು 
ಮೋಹನ್ ಪಟೇಲ್, ಗೀತಾ, ರಾಧಾ, ಗುರುಸ್ವಾಮಿ, ನಂದೀಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು