ಚಾಲಕನ ಅಜಾಗರೂಕತೆ : ಬಸ್‌ನಿಂದ ಬಿದ್ದು ಐದು ವರ್ಷದ ಶಾಲಾ ವಿದ್ಯಾರ್ಥಿನಿ ಸಾವು
ಜನವರಿ 10, 2023
ಕನಕಪುರ:
ಚಾಲಕ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ
ಶಾಲಾ ಬಸ್ನಿಂದ ಕೆಳಗೆ ಬಿದ್ದ
ವಿದ್ಯಾರ್ಥಿನಿಯೊಬ್ಬಳ ಮೇಲೆ ವ್ಯಾನ್
ಹಿಂಬದಿ ಚಕ್ರ ಹರಿದು ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ನಡೆದಿದೆ.
ಸಿದ್ದೇನಹಳ್ಳಿ
ಗ್ರಾಮದ ಸ್ವಾಮಿ ಎಂಬುವವರ ಮಗಳು ರಕ್ಷಿತಾ (೫) ಮೃತ ವಿದ್ಯಾರ್ಥಿನಿ.
ರಾಮನಗರ ತಾಲೂಕಿನ ಬಿಡದಿ ಬಳಿಯ ರಾಮನಹಳ್ಳಿ ಗೇಟ್ನ ಶ್ರೀ ಸಾಯಿ
ಇಂಟರ್ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಳು.
ಎಂದಿನಂತೆ
ಶಾಲೆ ಮುಗಿಸಿ ಬಸ್ನಲ್ಲಿ ಬರಬೇಕಾದ
ಸಂದರ್ಭದಲ್ಲಿ ಪಿಚ್ಚನಕೆರೆ
ಬಳಿ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿಯು ಬಸ್ನ
ಬಾಗಿಲು ಹಾಕಿರಲಿಲ್ಲ. ಆಗ ಚಾಲಕ ತಿರುವಿನಲ್ಲಿ
ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ
ವಿದ್ಯಾರ್ಥಿನಿ
ರಕ್ಷಿತಾ ಕೆಳಗಿ ಬಿದ್ದಿದ್ದಾಳೆ. ಬಿದ್ದಾಗ ಬಸ್ ಹಿಂದಿನ ಚಕ್ರ ತಲೆಯ ಮೇಲೆ
ಹತ್ತಿದ್ದು ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದ್ದಾಳೆ.
ಸುದ್ದಿ
ತಿಳಿದ ಕೂಡಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಶಾಲಾ ಬಸ್
ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮಗಳು ಬಸ್ನಿಂದ ಬಿದ್ದು ಸತ್ತ
ಸುದ್ದಿ ತಿಳಿದ ಪೋಷಕರು ಸ್ಥಳಕ್ಕೆ ಬಂದು ಗೋಳಾಡುತ್ತಿದ್ದು ಅವರ ಆಕ್ರಂದನ ಮುಗಿಲು
ಮುಟ್ಟಿತ್ತು. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು