ರಾಮನಗರ ರೇಷ್ಮೆ ಮಾರುಕಟ್ಟೆಗೆ ಕಾನೂನು ಮಾಪನ ಅಧಿಕಾರಿಗಳ ದಿಢೀರ್‌ ದಾಳಿ

ಪ್ರೇಮ್‌ ಕುಮಾರ್‌, ರಾಮನಗರ
ರಾಮನಗರ: ಇಲ್ಲಿನ ಜಿಲ್ಲಾ ರೇಷ್ಮೆ ಮಾರುಕಟ್ಟೆಗೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳ ತಂಡ ಕಂಟ್ರೋಲರ್‌ ಡಾ.ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ವಿಶ್ವದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆಯಾದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ 25 ತೂಕ ಮಾಪನ ಯಂತ್ರಗಳಿದ್ದು, 11 ತೂಕ ಮಾಪನಗಳು ಕಾರ್ಯನಿರ್ವಹಿಸುತ್ತಿವೆ.
8 ಹಿರಿಯ ಅಧಿಕಾರಿಗಳು ಸೇರಿದಂತೆ 60 ಜನರ ತಂಡದಿಂದ ಏಕ ಕಾಲದಲ್ಲಿ ರಾಮನಗರ, ಕನಕಪುರ, ಮಾಗಡಿಯಲ್ಲಿ ದಾಳಿ ನಡೆಸಿ ತೂಕದ ಯಂತ್ರಗಳನ್ನು ಪರಿಶೀಲನೆ ಮಾಡಿದ್ದು,
ಎಲ್ಲವೂ ಮೈನರ್ ವ್ಯತ್ಯಾಸ, ಪಾಸಿಟಿವ್ ಇದೆ. ರೈತರಿಗೆ ಯಾವುದೇ ತೊಂದರೆ ಆಗಲ್ಲಾ. ಸಾಮೂಹಿಕ ದೂರು ಹಿನ್ನಲೆಯಲ್ಲಿ ರೈತರ ಹಿತದೃಷ್ಠಿಯಿಂದ ದಾಳಿ ನಡೆಸಲಾಗಿದೆ ಎಂದು ಡಾ.ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.
ಬಳಕೆಯಲ್ಲಿರಲಿ, ಇಲ್ಲದಿರಲಿ ತೂಕದ ಯಂತ್ರಗಳು ಸರಿಯಾಗಿರಬೇಕು. ಮುಂದೆಯೂ ಅನಿರೀಕ್ಷಿತ ದಾಳಿ ನಡೆಸುತ್ತೇವೆ. ಇಲಾಖೆಯಿಂದ ಉಚಿತ ತೂಕದ ಯಂತ್ರವನ್ನು ಕೊಡಲಾಗುವುದು ಅನುಮಾನ ಬಂದರೆ ರೈತರು ಪರೀಕ್ಷೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಡೆಪ್ಯೂಟಿ ಕಂಟ್ರೋಲರ್ ಮಂಜುನಾಥ್, ಜಿಲ್ಲಾ ಅಧಿಕಾರಿ ಲೋಕೇಶ್, ರಾಮನಗರ ಜಿಲ್ಲಾ ಕಾನೂನು ಮಾಪನ ಇಲಾಖೆ ಸ್ಕ್ವಾಡ್‌ ತಂಡದವರು ದಾಳಿಯಲ್ಲಿ ಭಾಗವಹಿಸಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು