ನರಭಕ್ಷಕ ಚಿರತೆಗಳ ಬೇಟೆಗೆ ಕ್ಷಣಗಣನೆ, ನಾಳೆ ನರಸೀಪುರಕ್ಕೆ ಶಾರ್ಪ್ ಶೂಟರ್ಸ್ ಆಗಮನ ಸಾಧ್ಯತೆ
ಜನವರಿ 25, 2023
ಮೈಸೂರು: ತಾಲ್ಲೂಕಿನ ತಿ.ನರಸೀಪುರ ತಾಲ್ಲೂಕಿನಲ್ಲಿ ನಾಲ್ಕು ಜನರ ಸಾವಿಗೆ ಕಾರಣವಾಗಿರುವ ನರಭಕ್ಷಕ ಚಿರತೆಗಳನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಅಗತ್ಯ ಬಿದ್ದಲ್ಲಿ ಶಾರ್ಪ್ ಶೂಟರ್ಸ್‍ಗಳ ಸೇವೆ ಪಡೆಯಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇೀಖರ್ ಹೇಳಿದರು. ಚಿರತೆ ಸೆರೆ ಸಂಬಂಧ ನಗರದ ಜಿಪಂ ಸಭಾಂಗಣದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸ್ಥಳೀಯ ಶಾಸಕ ಅಶ್ವಿನ್ ಕುಮಾರ್ ಸಭೆಯಲ್ಲಿ ಪ್ರಸ್ತುತ ಪಡಿಸಿದ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ನಾಲೆಯಿಂದಲೇ ತಿ.ನರಸೀಪುರ ತಾಲ್ಲೂಕಿನಾದ್ಯಂತ ಹೆಚ್ಚುವರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ರಾತ್ರಿ ವೇಲೆ ವಿದ್ಯುತ್ ಕಡಿತ ಇರುವುದಿಲ್ಲ. ಆದಷ್ಟು ಬೇಗ ಕಬ್ಬು ಕಟಾವು ಮಾಡಲು ಸೂಚಿಸಲಾಗಿದೆ. ಚಿರತೆ ಹಾವಳಿ ತಪ್ಪಿಸಲು ಅಗತ್ಯವಿರುವ ಎಲ್ಲಾ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಜಿಲ್ಲಾಡಳಿತ ತಿ.ನರಸೀಪುರ ಜನತೆಗೆ ಸರ್ವ ರೀತಿಯಲ್ಲೂ ಅನುಕೂಲ ಮಾಡಲು ಸಿದ್ಧವಿದೆ ಎಂದರು. ಸಭೆಯಲ್ಲಿ ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಪಂ ಸಿಇಒ ಆರ್.ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಹೇಶ್, ಬಸವರಾಜ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು