ಮದ್ದೂರಿನಲ್ಲಿ ಮಹಿಳೆಯ ಸಜೀವ ದಹನ

ಮಂಡ್ಯ: ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಸಜೀವವಾಗಿ ಸುಟ್ಟು ಹಾಕಿ, ನಗ, ನಾಣ್ಯ, ನಗದು ದೋಚಿರುವ ಘಟನೆ ತಡರಾತ್ರಿ ನಡೆದಿದೆ. 
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಪ್ರೇಮ (೪೨) ಹತ್ಯೆಯಾದ ಮಹಿಳೆಯಾಗಿದ್ದಾರೆ. 
ತಮ್ಮ ಪತಿ ನಿಧನದ ಬಳಿಕ ಪ್ರೇಮ ಒಂಟಿಯಾಗಿದ್ದರು. ಒಬ್ಬ ಮಗ  ಬೆಂಗಳೂರಿನಲ್ಲಿ ವಾಸವಿದ್ದನು. ಪ್ರೇಮ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾಗ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಹಾಸಿಗೆಯಲ್ಲೆ ಪ್ರೇಮ ಸಂಪೂರ್ಣ ಸುಟ್ಟು ಭಸ್ಮವಾಗಿದ್ದಾರೆ. ಈ ಸಂಬAಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು