ಪಾಂಡವಪುರದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ : ಕಾರ್ಯಕರ್ತರ ಮನೆ ಮೇಲೆ ಹಾರಾಡಿದ ಬಿಜೆಪಿ ಬಾವುಟ

ಪಾಂಡವಪುರ : ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಕೃಷ್ಣಾನಗರ, ಬೀರಶೆಟ್ಟಹಳ್ಳಿ ಮುಂತಾದ ಬಡಾವಣೆಯ ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಪಕ್ಷದ ಬಾವುಟ ಹಾರಿಸುವ ಮೂಲಕ ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ.ಇಂದ್ರೇಶ್ ಮಾತನಾಡಿ, ದುದ್ದ ಹೋಬಳಿ ಸೇರಿದಂತೆ ಮೇಲುಕೋಟೆ ಕ್ಷೇತ್ರದಾದ್ಯಂತ ಪ್ರತಿಯೊಂದು ಬೂತ್ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಬೂತ್ ಮಟ್ಟದ ಮನೆ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಾಡಿಸುತ್ತೇವೆ. ಕನಿಷ್ಟ 25 ರಿಂದ ನೂರಾರು ಮನೆಗಳ ಮೇಲೆ ಬಾವುಟ ಕಟ್ಟಲಾಗುತ್ತಿದೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಉದ್ದೇಶ ಹೊಂದಿದ್ದೇವೆ ಎಂದರು.
ಮುಖಂಡರಾದ ಅಶೋಕ್, ರಾಜೀವ್, ಸಂದೇಶ್, ಬೀರಶೆಟ್ಟಹಳ್ಳಿ ಭಾಸ್ಕರ್, ನರಸಿಂಹಚಾರಿ, ಸೋಮಾಚಾರಿ, ರಾಮು ಸೇರಿದಂತೆ ಅನೇಕರಿದ್ದರು.

ಮಾನವೀಯತೆ ಮೆರೆದ ಡಾ.ಇಂದ್ರೇಶ್: 
ಪಟ್ಟಣದ ಬೀರಶೆಟ್ಟಹಳ್ಳಿ ಬಡಾವಣೆಯಲ್ಲಿ ಬೂತ್ ವಿಜಯ್ ಅಭಿಯಾನ ನಡೆಯುತ್ತಿದ್ದ ವೇಳೆ ಸ್ಥಳೀಯ ನಿವಾಸಿ ನರಸಮ್ಮ ಎಂಬ ವೃದ್ಧೆ ದಿಢೀರ್ ಅಸ್ವಸ್ಥರಾದಾಗ ಸ್ಥಳದಲ್ಲಿದ್ದ ಡಾ.ಇಂದ್ರೇಶ್ ಕೂಡಲೇ ತಮ್ಮ ಪರಿವರ್ತನ ಟ್ರಸ್ಟ್ ಆಂಬುಲೆನ್ಸ್ ಕರೆಸಿ ವೃದ್ಧೆಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು