ಬನ್ನೂರು : ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು
ಜನವರಿ 05, 2023
ನಾಗೇಂದ್ರ ಕುಮಾರ್, ಟಿ.ನರಸೀಪುರ ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿ ಗ್ರಾಮದ ಪಟೇಲ್ ಕ್ಯಾತೆಗೌಡ ಎಂಬವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಗುರುವಾರ ಸಂಜೆ ಪತ್ತೆಯಾಗಿವೆ. ಕಬ್ಬು ಕಡಿಯುವ ಸಂದರ್ಭದಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ತಾಯಿ ಚಿರತೆ ಸ್ಥಳದಿಂದ ಓಡಿ ಹೋಗಿರಬಹುದು ಎನ್ನಲಾಗಿದೆ. ಕೂಡಲೇ ಅರಣ್ಯ ಇಲಾಕೆ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು, ಅವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ತಾಯಿ ಚಿರೆತೆ ಸೆರೆಗೆ ಕಾರ್ಯಕ್ರಮ ರೂಪಿಸಿದ್ದಾರೆ.
0 ಕಾಮೆಂಟ್‌ಗಳು