ಬೆಟ್ಟದ ಮಾದಹಳ್ಳಿಯಲ್ಲಿ ಆನೆ ದಾಳಿ: ರೈತನಿಗೆ ತೀವ್ರ ಗಾಯ

ಗುಂಡ್ಲುಪೇಟೆ: ರೈತರೊಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ರೈತನಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಬಂಡೀಪುರ ಅಭಯಾರಣ್ಯದ ಗುಂಡ್ಲುಪೇಟೆ ಬಫರ್ ಝೋನ್ ವ್ಯಾಪ್ತಿಯ ಬೆಟ್ಟದಮಾದಹಳ್ಳಿಯ ರೈತರ ಜಮೀನೊಂದರಲ್ಲಿ ನಡೆದಿದೆ.
ಬೆಟ್ಟದ ಮಾದಹಳ್ಳಿ ಗ್ರಾಮದ ರೈತ ದೇವರಾಜಪ್ಪ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಘಟನೆಯಿಂದ ಬೆನ್ನಿಗೆ ತೀವ್ರತರವಾದ ಗಾಯಗಳಾಗಿದೆ ಎನ್ನಲಾಗುತ್ತಿದ್ದು, ಗಾಯಾಳುವನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆನೆಯು ಬೆಟ್ಟದಮಾದಹಳ್ಳಿ ವ್ಯಾಪ್ತಿಯ ರೈತರ ಜಮೀನಿನ ಬಾಳೆ ಬೆಳೆ, ಹುರುಳಿ ಸೇರಿದಂತೆ ಇನ್ನಿತರ ಕಡೆ ಆನೆಗಳು ಲಗ್ಗೆಯಿಟ್ಟಿದ್ದು, ಹಲವು ಜಮೀನುಗಳಲ್ಲಿ ಅಳವಡಿಕೆ ಮಾಡಿದ್ದ ತಂತಿ ಬೇಲಿಯನ್ನು ತುಳಿದು ಹಾಕಿದೆ ಎನ್ನಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಆನೆ ಸೆರೆಗೆ ಸಿದ್ಧತೆ ಆರಂಭಿಸಿದ್ದಾರೆ...
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು