ಚಲಿಸುತ್ತಿದ್ದ ಕಾರಿನ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ಕಾರು ಭಸ್ಮ

ಗುಂಡ್ಲುಪೇಟೆ: ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಕಾರಿನ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಕಾರು ಹೊತ್ತಿ ಉರಿದಿರುವ ಘಟನೆ ತಾಲೂಕಿನ ಹೊನ್ನೇಗೌಡನಹಳ್ಳಿ- ಗೋಪಾಲಪುರ ರಸ್ತೆಯಲ್ಲಿ ನಡೆದಿದೆ.
ಕೇರಳ ನೋಂದಣಿಯ ಕಾರು ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಕಾರಿನ ಚಕ್ರಕ್ಕೆ ಹುರುಳಿ ಸೆತ್ತೆ ಸುತ್ತಿಕೊಂಡಿದೆ.‌ ಇದರಿಂದ ಕ್ಷಣ ಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿತು. ಕೂಡಲೇ ಕಾರಿನಲ್ಲಿದ್ದ ಏಳು ಮಂದಿ ಯುವಕರು ತಮ್ಮ ವಸ್ತುಗಳಸಮೇತ ಕಾರಿನಿಂದ ಕೆಳಗಿಳಿದು ಪ್ರಾಣ ಕಾಪಾಡಿಕೊಂಡರು.
ಕ್ಷಣಮಾತ್ರದಲ್ಲಿ ಕಾರಿಗೆ ಬೆಂಕಿ ಆವರಿಸಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿಯಿತು.  
ವೇಳೆ ಸ್ಥಳೀಯರು ಬೆಂಕಿ ನಂದಿಸುವ ಕೆಲಸ ಮಾಡಿದ್ದರೂ ಪ್ರಯೋಜನವಾಗಿಲ್ಲ. ನಂತರ ಮಾಹಿತಿ ತಿಳಿದ  ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು