ನೇತಾಜಿ ಪ್ರೀಮಿಯರ್ ಲೀಗ್ ಕ್ರಿಕೆಟ್ : ಆಟಗಾರರ ಹರಾಜು, ಅತಿ ಹೆಚ್ಚು ಬೆಲೆಗೆ ಮಾರಾಟವಾದ ಫರಾಜ್, 2ನೇ ಸ್ಥಾನದಲ್ಲಿ ರಿಜ್ವಾನ್

ಶಾರುಕ್ ಖಾನ್, ಹನೂರು

ಹನೂರು: ನೇತಾಜಿ ಸುಭಾμï ಚಂದ್ರ ಬೋಸ್ ಅವರ 126ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ನೇತಾಜಿ ಕ್ರಿಕೆಟರ್ಸ್ ಹಾಗೂ ಎಮ್.ಆರ್. ಮಂಜುನಾಥ್ ಸಹಯೋಗದೊಂದಿಗೆ ಇಲ್ಲಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಜನವರಿ 20,21 ಹಾಗೂ 22 ರಂದು ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು, ಇಂದು ಆಟಗಾರರ ಹರಾಜು ನಡೆಯಿತು.
ಶ್ರೀ ಬೆಟ್ಟಳ್ಳಿ ಮಾರಮ್ಮ ಕಾಂಪ್ಲೆಕ್ಸ್‍ನಲ್ಲಿ ನಡೆದ ಎನ್‍ಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಎಸ್‍ಎಂಬಿ ರೆಬೆಲ್ಸ್, ಮಾನಸ ಸ್ಟಾರ್ ಬಾಯ್ಸ್, ಲಕ್ಕಿ ಬಾಯ್ಸ್, ಪವರ್ ವಾರಿಯರ್ಸ್, ಬೆಟ್ಟ ವಾರಿಯರ್ಸ್, ಗೋಕುಲ ಕ್ರಿಕೆಟರ್ಸ್, ಬಿಎಸ್ಎಫ್ ಟೈಗರ್ಸ್, ಹಾಗೂ ಎ ವಿಎಂ ಟೈಟನ್ಸ್ ತಂಡದ ಮಾಲೀಕರು ಹಾಗೂ ಕೀ ಪ್ಲೇಯರ್ಸ್‍ಗಳು ಪಾಲ್ಗೊಂಡಿದ್ದರು. 
ಖ್ಯಾತ ಬ್ಯಾಟ್ಸ್‍ಮನ್ ಫರಾಜ್ 1860 ರೂ. ಮಾರಾಟವಾಗಿ ಗೋಕುಲ ಕ್ರಿಕೆಟರ್ಸ್ ಸೇರಿದರೆ, 2ನೇ ಸ್ಥಾನದಲ್ಲಿ ರಿಜ್ವಾನ್ 1840 ರೂ, ಗೆ ಪವರ್ ವಾರಿಯರ್ಸ್ ತಂಡಕ್ಕೆ ಸೇರಿದರು.
ಜತೆಗೆ ಕುಮಾರ್ 1760 ರೂ.ಗಳಿಗೆ ಮಾರಾಟವಾಗಿ ಲಕ್ಕಿ ಬಾಯ್ಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಇವರು ಎನ್‍ಪಿಎಲ್ ಸೀಸನ್ 3 ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರರಾಗಿದ್ದಾರೆ.
ಪಟ್ಟಣ ಪಂಚಾಯಿತಿಯ ಸದಸ್ಯ ಆನಂದ್ ಕುಮಾರ್ ಹರಾಜು ಪ್ರಕ್ರಿಯೆ  ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಅತ್ಯುತ್ತಮ ಆಟಗಾರರು ಇದ್ದು, ಉತ್ತಮ ಪ್ರದರ್ಶನದ ಮೂಲಕ ಪಟ್ಟಣಕ್ಕೆ ಕೀರ್ತಿ ತನ್ನಿ ಎಂದರು.
ಆಯೋಜಕರಾದ ಶಶಿ, ಚೇತನ್ ಕುಮಾರ್ ಎಲ್., ಹಾಗೂ ತಂಡಗಳ ಮಾಲೀಕರಾದ ಗಂಗಣ್ಣ, ಆನಂದ್, ಮಹದೇವ್, ರಾಮಚಂದ್ರ, ಮಹೇಶ್, ನಾಗೇಂದ್ರ, ಮೇಘರಾಜ್, ಶಶಿಕುಮಾರ್, ಸತೀಶ್, ಮಹೇಶ್, ರವಿ ಇನ್ನು ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು