ನಾಳೆ ಜ.10ರಂದು ರಂಗಾಯಣ, ಕಲಾಮಂದಿರ ಸುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ
ಜನವರಿ 09, 2023
ಸಂಗ್ರಹ ಚಿತ್ರ ಮೈಸೂರು : ಇತ್ತೀಚೆಗೆ ರಂಗಾಯಣದಲ್ಲಿ ಪ್ರದರ್ಶನಗೊಂಡ ಸಾಂಬಶಿವ ಪ್ರಹಸನ ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಗ್ಗೆ ಅವಹೇಳನ ಖಂಡಿಸಿ ನಾಳೆ ರಂಗಾಯಣಕ್ಕೆ ಕುರುಬರ ಸಂಘ ಮತ್ತು ಹಿಂದುಳಿದ ವೇದಿಕೆ ಮುತ್ತಿಗೆ ಹಾಕಲಿದ್ದು, ಇದನ್ನು ನಿಷೇಧಿಸಿ ಮೈಸೂರು ಪೊಲೀಸ್ ಆಯುಕ್ತರು ಕಲಾಮಂದಿರ ಮತ್ತು ರಂಗಾಯಣ ಸುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ನಾಳೆ ರಂಗಾಯಣಕ್ಕೆ ಸುಮಾರು 10 ಸಾವಿರ ಜನರಿಂದ ಮುತ್ತಿಗೆ ಹಾಕುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ರಂಗಾಯಣ ಸಂಸ್ಥೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧೀನದಲ್ಲಿ ಬರಲಿದ್ದು, ನಿರ್ದೇಶಕರು, ಸಹಾಯಕ ನಿರ್ದೇಶಕರು, ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ರಂಗಕರ್ಮಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಹಾಗೂ ರಂಗಾಯಣದ ಆವರಣದಲ್ಲಿರುವ ಕಾರಂತರ ಚಾವಡಿ, ಭೂಮಿಗೀತ, ವನರಂಗಗಳಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಕಲಾವಿದರು, ರಾಜ್ಯದ ವಿವಿಧ ಜಿಲ್ಲೆಗಳಿಂದ ರಂಗಾಯಣದ ವಿದ್ಯಾರ್ಥಿಗಳು ನಾಟಕದ ಪೂರ್ವ ತಯಾರಿಯನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತಿರುತ್ತಾರೆ. ಇದರೊಂದಿಗೆ ಹಲವಾರು ಪ್ರದರ್ಶನಗಳು ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ರಂಗಾಸಕ್ತರು ಬಂದು ಹೋಗುತ್ತಿರುತ್ತಾರೆ. ಪ್ರತಿಭಟನೆ ನಡೆಸಿದರೆ ರಂಗಾಯಣದ ಸಾರ್ವಜನಿಕ ಆಸ್ತಿಯ ನಷ್ಟ, ನೌಕರರ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ರಂಗಾಯಣ ಮತ್ತು ಕಲಾಮಂದಿರ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಲಂ 144 ಸಿಆರ್‍ಪಿಸಿ 1973 ರೀತ್ಯ ನಿμÉೀಧಾಜ್ಞೆ ಜಾರಿಗೊಳಿಸಲಾ ಗಿದೆ ಎಂದು ಎಂದು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಬಿ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್‌ಗಳು