ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ರೈತರ ಪ್ರತಿಭಟನೆ

ವರದಿ: ಶಾರುಕ್ ಖಾನ್ ಹನೂರು .
ಹನೂರು: ಯಾವುದೇ ಸರ್ಕಾರ ಬರಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಪಲವಾಗಿವೆ. ಇದರಿಂದ ಬೆಳೆ ನಾಶವಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಬಸವಣ್ಣ ತಿಳಿಸಿದರು. 
ವಿದ್ಯುತ್ ವ್ಯತ್ಯಯ ಖಂಡಿಸಿ ವಿದ್ಯುತ್ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಇಡೀ ರಾಜ್ಯದಲ್ಲೆ ವಿದ್ಯುತ್ ಸಮಸ್ಯೆಯಿದೆ ನಮಗೆ ಅವಶ್ಯಕತೆ ಇರುವಾಗಲೇ ವಿದ್ಯುತ್ ಕಡಿತ ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.  
ತಾಲ್ಲೂಕು ಅಧ್ಯಕ್ಷ ಗೌಡೇಗೌಡ ಮಾತನಾಡಿ, ಜಿಲ್ಲೆಯ ತೋಟದ ಮನೆಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಜಮೀನುಗಳಿಗೂ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ.
ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳು ಮೇಯಿಸಲು ಬಿಡುತ್ತಿಲ್ಲ ಎಂದು ಕಿಡಿ ಕಾರಿದರು.
ರೈತ ಸಂಘದ ಮುಖಂಡರಾದ ಶಿವರಾಮು, ರವಿ ನಾಯ್ಡು, ಮುತ್ತುರಾಜು, ಬಸವರಾಜ್, ಬಸವರಾಜು ಕಾಂಚಳ್ಳಿ, ಮಹಾದೇವಸ್ವಾಮಿ, ಪಳನಿಮೆಡು,  ಕನಕಮ್ಮ, ಪೋಂಗಡಿ ಲೋಕೇಶ್, ಪಳನಿಸ್ವಾಮಿ, ವೇಲುಸ್ವಾಮಿ, ಅಧಿಕಾರಿಗಳಾದ ಎಇಇ ಶಂಕರ್, ವಸಂತ್ ಕುಮಾರ್ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು