ಕುವೆಂಪು ಮಂತ್ರ ಮಾಂಗಲ್ಯದ ಮೂಲಕ ದಂಪತಿಗಳಾದ ವಿವೇಕ್, ಸುಶ್ಮಿತಾ
ಡಿಸೆಂಬರ್ 12, 2022
ಮೈಸೂರು: ಯಾವುದೇ ಮಂತ್ರ ಘೋಷವಿಲ್ಲದೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ಎಸ್.ವಿವೇಕ್ ಮತ್ತು ಎಂ.ಸುಶ್ಮಿತಾ ವೈವಾಹಿಕ ಇಂದು ಜೀವನಕ್ಕೆ ಕಾಲಿಟ್ಟರು. ನಗರದ ಆಲನಹಳ್ಳಿ ರಿಂಗ್ ರಸ್ತೆ ಬಳಿಯ ವೈದ್ಯರ ಸಮುದಾಯ ಭವನದಲ್ಲಿ ಸೋಮವಾರ ಸರಳ ವಿವಾಹವಾದ ನೂತನ ದಂಪತಿಗಳಿಗೆ ವಿವೇಕಾನಂದ ಎಚ್. ಅವರು ಕುವೆಂಪು ಆಶಯಗಳನ್ನು ಓದಿಸುವ ಮೂಲಕ ಪ್ರತಿಜ್ಞಾ ವಿಧಿ ಭೋದಿಸಿದರು. ಇಂದಿನಿಂದ ನಾವು ಯಾವುದೇ ಜಾತಿ ಧರ್ಮಗಳನ್ನು ಒಳಗೊಳ್ಳದೆ ಮನುಷ್ಯಜಾತಿಯೊಂದೆ ನಂಬಿ ಜೀವನ ನಡೆಸುತ್ತೇವೆ. ಇನ್ನು ಮುಂದೆ ಮೌಢ್ಯ ಕಂದಾಚಾರಗಳಿಗೆ ಒಳಗಾಗದೆ ಗಂಡ ಹೆಂಡತಿಯರಾಗಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವುದಾಗಿ ಹೇಳಿದರು. ನಂತರ ಹಿರಿಯ ದಂಪತಿಗಳ ಆಶೀರ್ವಾದ ಪಡೆದು ಮಾಂಗಲ್ಯ ಧಾರಣೆ ಮಾಡಲಾಯಿತು. ವಿವಾಹ ಕಾರ್ಯಕ್ರಮದಲ್ಲಿ ನೂತನ ವಧುವರರ ತಂದೆ, ತಾಯಿ, ಸಾಹಿತಿ ಕಾಳೇಗೌಡ ನಾಗವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು