ಹಾಡ ಹಗಲೇ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ಕತ್ತರಿಸುವ ಬೆದರಿಕೆ ಹಾಕಿದ ಲೇಡಿ ರೌಡಿ : ದೂರು ದಾಖಲಾಗುತ್ತಿದ್ದಂತೆ ಎಸ್ಕೇಪ್

ಮೈಸೂರು : ಕೆಎಸ್‍ಆರ್‍ಟಿಸಿ ಕಟ್ಟಡದ ಬಾಡಿಗೆ ಕೇಳಲು ಬಂದ ಅಧಿಕಾರಿಗಳಿಗೆ ಮಚ್ಚು ತೋರಿಸಿ ಕತ್ತರಿಸುವ ಬೆದರಿಕೆ ಹಾಕಿದ ಮಹಿಳೆಯೊಬ್ಬರು ದೂರು ದಾಖಲಾಗುತ್ತಿದ್ದಂತೆ ಎಸ್ಕೇಪ್ ಆದ ಘಟನೆ ಮೈಸೂರಿನ ಸಾತಗಳ್ಳಿ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ನಗರದ ಶಫಿ ಅಹಮದ್ ಎಂಬವರು ಸಾತಗಳ್ಳಿ ಬಸ್ ನಿಲ್ದಾಣದ ಕಟ್ಟಡವನ್ನು ಬಾಡಿಗೆಗೆ ಪಡೆದು ಅಲ್ಲಿ ಖಾಸಗಿ ಕಾಲೇಜು ನಡೆಸುತ್ತಿದ್ದರು. ಆದರೆ ಬಾಡಿಗೆ ನೀಡದ ಕಾರಣ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಶಫಿ ಅಹಮದ್‍ಗೆ ನೋಟಿಸ್ ಕೊಟ್ಟಿದ್ದರು ಎನ್ನಲಾಗಿದೆ.
ಇಂದು ಬೆಳಿಗ್ಗೆ ಕಟ್ಟಡದ ಬಳಿ ಬಂದ ಅಧಿಕಾರಿಗಳಿಗೆ ಶಫಿ ಅಹಮದ್ ಅವರ ಪತ್ನಿ ಮಚ್ಚು ತೋರಿಸಿ ಧಮಕಿ ಹಾಕಿದ ಘಟನೆ ನಡೆದಿದ್ದು, ಮಹಿಳೆ ಮಚ್ಚು ಹಿಡಿದು ಧಮ್ಕಿ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಫಿ ಮತ್ತು ಆತನ ಪತ್ನಿ ಈಗ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು