ಹನೂರು ತಾಲೂಕಿನ ಚಿಕ್ಕಿಂದುವಾಡಿ ಗ್ರಾಮದ ಬಳಿ ಚಿರತೆ ದಾಳಿಗೆ ಹಸು ಬಲಿ
ಡಿಸೆಂಬರ್ 01, 2022
-ಶಾರುಕ್ ಖಾನ್, ಹನೂರು
ಹನೂರು : ತಾಲೂಕಿನ ಚಿಕ್ಕಿಂದುವಾಡಿ ಗ್ರಾಮದ ಬಳಿ ಚಿರತೆ ದಾಳಿಯಿಂದ ಹಸು ಮೃತಪಟ್ಟಿದೆ. ರಾಚಯ್ಯ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಒಂದು ಹಸು ಕಾಣೆಯಾಗಿದೆ. ಇದನ್ನು ಹುಡುಕಿಕೊಂಡು ಹೋದಾಗ ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ತಿನ್ನುತ್ತಿರುವುದನ್ನು ಕಣ್ಣಾರೆ ಕಂಡು ಗಾಬರಿಯಿಂದ ಕೂಗಿಕೊಂಡು ಓಡಿ ಬಂದಿದ್ದಾರೆ. ಬಳಿಕ ಜನರ ಗುಂಪು ಸ್ಥಳಕ್ಕೆ ಹೋಗುತ್ತಿದ್ದಂತೆ ಚಿರತೆ ಅಲ್ಲಿಂದ ಓಡಿ ಹೋಗಿದೆ. ಹಸುವಿನ ರುಚಿ ನೋಡಿರುವ ಚಿರತೆ ಮತ್ತೆ ಗ್ರಾಮಕ್ಕೆ ಬರುವ ಸಂಭವವಿದೆ. ರಾತ್ರಿ ವೇಳೆ ಕೊಟ್ಟಿಗೆಗಳಿಗೆ ನುಗ್ಗಿ ಹಸು ಕುರಿಗಳನ್ನು ತಿನ್ನುವ ಸಂಭವ ಇರುವುದರಿಂದ ಕೂಡಲೇ ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು