ಹಾಸನ: ಕೆಲಸ ಕೊಡಿಸುವುದಾಗಿ ಫೋನ್‍ಪೇ ಮೂಲಕ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಇಲ್ಲಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಂತಿನಗರದ ಕಿರಣ್ ಕುಮಾರ್ ವಿವಿಧ ಕಂಪನಿಗಳಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ, ಕೆಲಸ ಕೊಡಿಸುವುದಾಗಿ ಹೇಳಿದ್ದ. ಅದರಂತೆ ವಿವಿಧ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿದ್ದು, ಫೋನ್ ಪೇ ಮೂಲಕ ಹಣ ಕಳುಹಿಸುವಂತೆ ಹೇಳಿದ್ದ. ಅದರಂತೆ ಕಿರಣ್‍ಕುಮಾರ್ ಹಂತ ಹಂತವಾಗಿ ಒಟ್ಟು 2.50 ಲಕ್ಷ ಹಾಕಿದ್ದಾರೆ. ನಂತರ ಕೆಲಸವನ್ನು ಕೊಡಿಸದೇ ವಂಚಿಸಿದ್ದು, ಈ ಬಗ್ಗೆ ಕಿರಣ್ ಕುಮಾರ್ ಸೆನ್ ಠಾಣೆಗೆ ದೂರು ನೀಡಿದ್ದಾರೆ.
0 ಕಾಮೆಂಟ್‌ಗಳು