ಶಾ ಕಾಲಿಟ್ಟ ಕಡೆ ಗೆಲುವು:ಡಾ.ಇಂದ್ರೇಶ್‌

ಮೇಲುಕೋಟೆಯಿಂದ ಸಾವಿರಾರು ಜನ ಭಾಗಿ

ಪಾಂಡವಪುರ : ಮಂಡ್ಯ ಜಿಲ್ಲೆಯಲ್ಲಿ ಇಂದು ಹಬ್ಬದ ವಾತಾವರಣ ಮೂಡಿದ್ದು ಬಿಜೆಪಿ ಸಂಘಟನಾ ಚತುರ ಅಮಿತ್‌ ಶಾ ಮಂಡ್ಯಕ್ಕೆ ಆಗಮಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್‌.ಎಸ್‌.ಇಂದ್ರೇಶ್‌ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿ, ಮಂಡ್ಯದಲ್ಲಿ ನಡೆಯುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಕ್ಕೆ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಿಂದ ೧೭೦ ಬಸ್‌ ಹಾಗೂ ಇನ್ನಿತರೆ ವಾಹನಗಳ ಮೂಲಕ ೧೫ ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಇದೊಂದು ಅಭೂತಪೂರ್ವ ಯಶಸ್ಸು ಪಾಂಡವಪುರ ಇತಹಾಸದಲ್ಲೇ ಹಿಂದೆಂದೂ ಬಿಜೆಪಿಗೆ ಇಂತಹ ಬೆಂಬಲ ವ್ಯಕ್ತವಾಗಿರಲಿಲ್ಲ. ಈಗಾಗಲೇ ಅಮಿತ್‌ ಶಾ ಕಾಲಿಟ್ಟ ಕಡೆ ಬಿಜೆಪಿ ಗೆಲುವು ಸಾಧಿಸಿದೆ. ಮೇಲುಕೋಟೆ ಕ್ಷೇತ್ರ ಸೇರಿದಂತೆ ಜಿಲ್ಲೆಯ ಏಳು ಸ್ಥಾನಗಳಲ್ಲೂ ಈ ಬಾರಿ ಕಮಲ ಅರಳಲಿದೆ ಎಂದರು.
ವಿವಿಧ ಕಲಾತಂಡಗಳ ವಾದ್ಯಗೋಷ್ಠಿಯ ಸಂಭ್ರಮದ ನಡುವೆ ಡಾ.ಇಂದ್ರೇಶ್‌ ನೇತೃತ್ವದಲ್ಲಿ ಸಾವಿರಾರು ಜನರನ್ನು ಮಂಡ್ಯಕ್ಕೆ ಕರೆತರಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು