ಮೈಸೂರು ಗುಜರಿಯಲ್ಲಿ ಅಗ್ನಿ ಅವಘಡ : ಹೊತ್ತಿ ಉರಿದ ಮಳಿಗೆಗಳು, ಅಗ್ನಿಶಾಮಕ ದಳದಿಂದ ತಪ್ಪಿದ ಭಾರಿ ಅನಾಹುತ

ಮೈಸೂರು : ವಿದ್ಯುತ್ ಶಾರ್ಟ್ ಸೆಕ್ರ್ಯೂಟ್ ನಿಂದ ಪೆಟ್ಟಿ ಅಂಗಡಿಗಳು ಹೊತ್ತಿ ಉರಿದ ಘಟನೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿಯ ದೊಡ್ಡ ಗುಜರಿಯಲ್ಲಿ ನಡೆದಿದೆ.

ಗುಜರಿ ಸಾಮಾನು ಮಾರಾಟ ಮಾಡುವ ಮಳಿಗೊಂದರಲ್ಲಿ ಇಂದು ಶಾರ್ಟ್ ಸಕ್ರ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿತು. ನೋಡ ನೋಡುತ್ತಿದ್ದಂತೆ ಅಂಗಡಿಗಳು ಹೊತ್ತಿ ಉರಿದವು. ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ನೆರವಾದರು. ಸಕಾಲಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದ ಕಾರಣ ಭಾರಿ ಅನಾಹುತ ತಪ್ಪಿದೆ. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. 
ಸುಮಾರು 20 ನಿಮಿಷಗಳ ಕಾಲ ಹಳೆಯ ವಾಹನಗಳ ಬಿಡಿ ಭಾಗಗಳನ್ನು ಸಂಗ್ರಹಿಸಿದ್ದ ಮಳಿಗೆ ಹೊತ್ತಿ ಉರಿಯುತು. ಶುಕ್ರವಾರ ವಿಶೇಷ ಪ್ರಾರ್ಥನೆ ಇದ್ದ ಕಾರಣ ಗುಜರಿಯಲ್ಲಿ ಜನಸಂಖ್ಯೆ ವಿರಳವಾಗಿದ್ದ ವೇಲೆ ಘಟನೆ ಸಂಭವಿಸಿತು ಎನ್ನಲಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು