ಚಕ್ರ ಸಿಡಿದು ಕಾರು ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಮಗು ಸಾವು, ಆರು ಜನರಿಗೆ ಗಾಯ ಒಬ್ಬರ ಸ್ಥಿತಿ ಗಂಭೀರ
ಡಿಸೆಂಬರ್ 22, 2022
ಶಾರುಕ್ ಖಾನ್, ಹನೂರು ಹನೂರು : ಚಕ್ರ ಸಿಡಿದು ಕಾರು ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಮಗುವೊಂದು ಸ್ಥಳದಲ್ಲೇ ಸಾವೀಗೀಡಾದ ದಾರುಣ ಘಟನೆ ತಾಲೂಕಿನ ಮಂಗಲ ಗ್ರಾಮದ ಸಮೀಪ ಹುಣಸೇ ಗುಡ್ಡೆ ಹತ್ತಿರ ಇಂದು ನಡೆದಿದೆ. ಮೂರು ವರ್ಷದ ತನ್ಮಯ್ ಸಾವೀಗೀಡಾದ ದುರ್ದೈವಿ. ಘಟನೆಯಲ್ಲಿ ಕಾರಿನಲ್ಲಿದ್ದ ಮಂಜು, ಸಾಕಮ್ಮ, ಕಿರಣ್, ಚಂದ್ರಮ್ಮ, ಸಂತೆಯಮ್ಮ, ಚಾಲಕ ವೆಂಕಟೇಶ್ ಎಂಬುವವರು ಗಾಯಗೊಂಡವರು.
ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ತಮ್ಮ ಸ್ವಗ್ರಾಮ ಮೈಸೂರು ತಾಲೂಕಿನ ಮಾರ್ಬಳಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹನೂರು ಪೊಲೀಸರು ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಸಮೀಪದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಇಂದು ಮೃತಪಟ್ಟ ಮಗುವಿನ ಹುಟ್ಟಿದ ಹಬ್ಬ ಎಂದು ತಿಳಿದುಬಂದಿದೆ.
0 ಕಾಮೆಂಟ್‌ಗಳು