ಕೊನೆಗೂ ಸೆರೆಯಾದ ನರಭಕ್ಷಕ ಚಿರತೆ : ನಿಟ್ಟುಸಿರು ಬಿಟ್ಟ ಟಿ.ನರಸೀಪುರ ಜನತೆ.

ತಿ.ನರಸೀಪುರ: ಇಬ್ಬರ ಸಾವು, ಹಲವರ ಮೇಲೆ ದಾಳಿ ನಡೆಸಿ, ಮೇಕೆಗಳನ್ನು ಹೊತ್ತೊಯ್ದೆ ಸಾರ್ವಜನಿಕರ ನಿದ್ದೆಗೆಡಿಸಿದ್ದ ನರಭಕ್ಷಕ ಚಿರತೆ ಕೊನೆಗೂ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯ ನಂತರ ಬೋನಿಗೆ ಬಿದ್ದಿದೆ.
ತಾಲೂಕಿನ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಈ ಚಿರತೆ ಸೆರೆ ಸಿಕ್ಕಿದ್ದು,ಕಳೆದ ಹಲವು ದಿನಗಳಿಂದಲೂ ಗ್ರಾಮದ ಸುತ್ತಲು ಚಿರತೆ ಓಡಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯು   ಭಾಗದಲ್ಲಿ ಚಿರತೆ ಬಂಧನಕ್ಕೆ ಬೋನು ಇರಿಸಿದ್ದರು.

ಬುಧವಾರ ರಾತ್ರಿ 8 ಘಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಬಂಧನಕ್ಕೆ ಬೋನಿನಲ್ಲಿ ಕೋಳಿಯನ್ನು ಇರಿಸಿದ್ದು, ಕೋಳಿ ತಿನ್ನಲು ಬಂದ ಚಿರತೆ ಸೆರೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಎರಡೂವರೆ  ವರ್ಷದ ಈ ಚಿರತೆಯು ಮುತ್ತತ್ತಿ ಗ್ರಾಮದ ಭಾಗದಲ್ಲಿ ಬೋನಿಗೆ ಬಿದ್ದಿದ್ದು, ಗ್ರಾಮದ ಜನತೆ ನೀಡಿದ ಮಾಹಿತಿ ಮೇರೆಗೆ   ತೋಟವೊಂದರಲ್ಲಿ ಬೋನು ಇರಿಸಲಾಗಿದ್ದರಿಂದ ಚಿರತೆ ಸೆರೆ ಸಿಕ್ಕಿದೆ.ಮೇಲಧಿಕಾರಿಗಳ ಸಮ್ಮುಖದಲ್ಲಿ ವೈದ್ಯಕೀಯ ತಪಾಸಣೆ ನಂತರ ಚಿರತೆಯನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ರವಾನಿಸಲಾವುದು
ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.