ಸಹ ಪಂಕ್ತಿ ಭೋಜನ: ಮಾಜಿ ಸಚಿವ ಬಿ.ಸೋಮಶೇಖರ್, ಸಮಾಜ ಸೇವಕ ಉದಯ್ ಭಾಗಿ .
ಡಿಸೆಂಬರ್ 22, 2022
ಟಿ.ಬಿ.ಸಂತೋಷ, ಮದ್ದೂರು ಮದ್ದೂರು: ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಹೋರಾಟಗಾರ ಚಿದಂಬರ ಮೂರ್ತಿ ಅವರ ಹುಟ್ಟು ಹಬ್ಬದ ಅಂಗವಾಗಿ ಸರ್ವ ಸಮುದಾಯದ ಸಹ ಪಂಕ್ತಿ ಭೋಜನದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್, ಸಮಾಜ ಸೇವಕ ಕದಲೂರು ಉದಯ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸುವದರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾತಿ ನಿರ್ಮೂಲನೆ ಪ್ರಕ್ರಿಯೆ ಹೆಚ್ಚಾಗಿದೆ. ಆನರು ಪ್ರಜ್ಞಾವಂತರಾಗಿದ್ದಾರೆ. ಯುವಕರು ಶಿಕ್ಷಣ ಪಡೆದು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಜಾತಿ ಪದ್ದತಿಯ ನಿರ್ಮೂಲನೆ ಮಾಡಬೇಕು ಎಂದರು. ಸಮಾಜ ಸೇವಕ ಹಾಗೂ ಕದಲೂರು ಉದಯ್ ಮಾತನಾಡಿ, ಸರ್ವ ಧರ್ಮದವರು ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸುವ ಪ್ರಯತ್ನದಲ್ಲಿ ಸಹಪಂಕ್ತಿ ಭೋಜನ ಉತ್ತಮ ಬೆಳವಣಿಗೆ ಎಂದರು. ಅಖಿಲ ಕರ್ನಾಟಕ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು, ಚಿದಂಬರಂ ಮೂರ್ತಿ, ಮಾಜಿ ಜಿಪಂ ಸದಸ್ಯ ಎ.ಟಿ.ಬಲ್ಲೆಗೌಡ, ರೈತ ಮುಖಂಡ ಅಣ್ಣುರು ಮಹೇಂದ್ರ, ರಘು ವೆಂಕಟೆಗೌಡ, ಕರಡಕೆರೆ ಯೋಗೇಶ್, ವಸಂತಮ್ಮ, ಗ್ರಾಪಂ ಸದಸ್ಯೆ ದೇವಿರಮ್ಮ, ಶ್ರೀಕ ಶ್ರೀನಿವಾಸ, ಹನುಮೇಶ್, ಹೆಮ್ಮನಹಳ್ಳಿ ಕೃಷ್ಣ, ಹುಲಿಗೆರೆಪುರ ಮಹದೇವು ಮುಂತಾದವರು ಇದ್ದರು.
0 ಕಾಮೆಂಟ್‌ಗಳು