ಮಟ್ಕಾ ದಂಧೆ ಅಡ್ಡೆ ಮೇಲೆ ಸಿಸಿಬಿ ದಾಳಿ : ೯ಜನರ ಬಂಧನ, ೩೩,೩೦೦ ನಗದು, ದಾಖಲೆ ವಶ


ಮೈಸೂರು : ನಗರದ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ೯ ಜನ ಆರೋಪಿಗಳನ್ನು ಬಂಧಿಸಿ ೩೩,೩೦೦ ರೂ. ನಗದು ಹಾಗೂ ಮಟ್ಕಾ ದಂಧೆಗೆ ಬಳಸಿದ್ದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
 ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾನಗರ, ಸಿ ಬ್ಲಾಕ್, ಸುಲ್ತಾನ್ ರಸ್ತೆಯಲ್ಲಿರುವ ಖದೀರ್ ಕೇರಂ ಬೋರ್ಡ್, ಕ್ಲಬ್ ಮುಂಭಾಗ
ಇಮ್ರಾನ್ ಟೀ ಸ್ಟಾಲ್ ಮುಂಭಾಗ, ನರಸಿಂಹರಾಜ ಠಾಣಾ ವ್ಯಾಪ್ತಿಯ ಬಿ.ಬಿ.ಕೇರಿಯ ಮಂಟೇಸ್ವಾಮಿ ದೇವಸ್ಥಾನದ ರಸ್ತೆಯ ೧ನೇ
ಕ್ರಾಸ್ನಲ್ಲಿರುವ ಮನೆಯ ಮುಂಭಾಗ
ದಾಳಿ ನಡೆಸಲಾಗಿದೆ. ಈ ಸಂಬಂಧ ಉದಯಗಿರಿ ಮತ್ತು ಎನ್‌,ಆರ್‌,ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು