ಸಿಸಿಬಿ ಪೊಲೀಸರ ದಾಳಿ : ಗಾಂಜಾ, ಚರಸ್‌ ಮಾರುತ್ತಿದ್ದ ಇಬ್ಬರ ಬಂದನ, ೪.೨೦ ಲಕ್ಷ ರೂ ಮೌಲ್ಯದ ಮಾಧಕ ವಸ್ತುಗಳ ವಶ

ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಗಾಂಜಾ ಮತ್ತು ಚರಸ್‌ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ೪.೨೦ ಲಕ್ಷ ರೂ. ಮೌಲ್ಯದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೀವ್ ನಗರ ೨ನೇ ಹಂತ, ಸೈಯದ್ ಅಬ್ದುಲ್ ರೆಹಮಾನ್ ರಸ್ತೆಯಲ್ಲಿ ಒಬ್ಬ
ಆರೋಪಿಯನ್ನು ದಸ್ತಗಿರಿ ಮಾಡಿರುವ ಸಿಸಿಬಿ ಪೊಲೀಸರು ಆತನಿಂದ ಅಂದಾಜು ರೂ. ೭೦ ಸಾವಿರ ಮೌಲ್ಯದ ೧ ಕೆ.ಜಿ.
೧೬೦ ಗ್ರಾಂ ಗಾಂಜಾ, ತೂಕದ ಯಂತ್ರ, ೧೮೫೦ ನಗದು ಮತ್ತು ಒಂದು ದ್ವಿ ಚಕ್ರ ವಾಹನವನ್ನು
ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ
ಮುಂದುವರೆದಿದೆ. ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಗರದ ಆಲನಹಳ್ಳಿ ಠಾಣಾ ವ್ಯಾಪ್ತಿಯ ಟಿ. ನರಸೀಪುರ ಮುಖ್ಯ ರಸ್ತೆಯ ಆಲನಹಳ್ಳಿ ಕೆರೆಗೆ ಹೊಂದಿಕೊಂಡಂತಿರುವ ಅರಳಿ ಮರದ ಬಳಿ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಅಂದಾಜು ಮೌಲ್ಯ ,೫೦ ಲಕ್ಷ ರೂ  ಮೌಲ್ಯದ ೧೨೬ ಗ್ರಾಂ ಛರಸ್, ತೂಕದ ಯಂತ್ರ, ಒಂದು ದ್ವಿ ಚಕ್ರ ವಾಹನವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದಲ್ಲೂ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಡಿಸಿಪಿ ಎಂ.ಎಸ್‌. ಗೀತ. ಸಿಸಿಬಿ  ಎಸಿಪಿ ರವರಾದ ಸಿ.ಕೆ. ಅಶ್ವಥ್ ನಾರಾಯಣ ಮಾರ್ಗದರ್ಶನದಲ್ಲಿ ಸಿಸಿಬಿ, ಹೆಚ್ ಮತ್ತು ಬಿ ವಿಭಾಗದ  ಇನ್ಸ್‌ಪೆಕ್ಟರ್‌ ಜಿ.
ಶೇಖರ್, ಸಿಬ್ಬಂದಿಗಳಾದ ಸಲೀಂ ಪಾಷ, ಸುರೇಶ್, ಟಿ. ಪ್ರಕಾಶ್, ಗಣೇಶ್, ಉಮಾಮಹೇಶ್, ನಭಿ ಪಟೇಲ ಇಂಗನಕಲ್ಲ ಅವರು ದಾಳಿಯಲ್ಲಿ ಭಾಗವಹಿಸಿದ್ದು, ನಗರದ ಪೊಲೀಸ್ ಆಯುಕ್ತ ಬಿ. ರಮೇಶ್ ಪೊಲೀಸರನ್ನು ಪ್ರಶಂಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು