ಇಬ್ಬರು ಕಳ್ಳರ ಬಂಧನ, ಹತ್ತು ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ
ಡಿಸೆಂಬರ್ 23, 2022
ಮೈಸೂರು : ಇಬ್ಬರು
ಖತರ್‌ನಾಕ್ ಕಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೧೦ ಲಕ್ಷ ರೂ. ಮೌಲ್ಯದ ೧೩೬ ಗ್ರಾಂ ಚಿನ್ನಾಭರಣ,
ಒಂದು ದ್ವಿಚಕ್ರ ವಾಹನ ಮತ್ತು ೩ ಮಾರುತಿ ೮೦೦ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೈಸೂರು
ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳವು ಮಾಡಿದ್ದು, ಇವರ ಬಂಧನದಿಂದ ಮೈಸೂರು ನಗರ ಜಯಲಕ್ಷ್ಮಿಪುರಂ,
ಕುವೆಂಪುನಗರ, ಸರಸ್ವತಿಪುರಂ ನಜರ್‌ಬಾದ್, ಹಾಸನ ಟೌನ್ ಕೆ.ಆರ್. ಪೇಟೆ, ಬೀರೂರು ಠಾಣಾ ವ್ಯಕ್ತಿಯ
ಕನ್ನ, ಮನೆ ಕಳವು, ಸುಲಿಗೆ ಮತ್ತು ವಾಹನ ಕಳುವು ಪ್ರಕರಣಗಳು ಪತ್ತೆಯಾಗಿರುತ್ತವೆ. ಡಿಸಿಪಿ ಎಂ.ಎಸ್.
ಗೀತ ಸಿಸಿಬಿ ಎಸಿಪಿ ಸಿ.ಕೆ. ಅಶ್ವಥ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಹೆಚ್ ಮತ್ತು ಬಿ ವಿಭಾಗದ
ಇನ್ಸ್‌ಪೆಕ್ಟರ್ ಜಿ. ಶೇಖರ್, ಎಎಸ್ಐ
ಅಸ್ಗರ್ ಖಾನ್ ಸಿಬ್ಬಂದಿಗಳಾದ ಸಲೀಂ ಪಾಷ, ರಾಮಸ್ವಾಮಿ, ಯಾಕೂಬ್ ಷರೀಫ್, ಆನಂದ, ನರಸಿಂಹ,
ಉಮಾ ಮಹೇಶ್, ಗಣೇಶ್, ಗೌತಮ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದು, ಮೈಸೂರು ನಗರದ ಪೊಲೀಸ್ ಆಯುಕ್ತ
ಬಿ. ರಮೇಶ್ ಪತ್ತೆ ಕಾರ್ಯವನ್ನು ಪ್ರಶಂಸಿದ್ದಾರೆ.
0 ಕಾಮೆಂಟ್‌ಗಳು