ಕನ್ನಡದ ನೆಲ, ಜಲ, ಭಾಷೆಗೆ ಅಪಾಯ ಬಂದಾಗ ಕನ್ನಡಿಗರೆಲ್ಲಾ ಒಗ್ಗಟ್ಟಾಗಬೇಕು : ನೇಮತ್ ಪಾಶ

ಹನೂರು : ಕನ್ನಡ ನೆಲ, ಜಲ,  ಭಾಷೆ ವಿಷಯವಾಗಿ ರಾಜ್ಯದ ಪ್ರತಿಯೊಬ್ಬ ನಾಗರಿಕರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಹನೂರು ತಾಲೂಕು ಘಟಕದ ನೂತನ ಅಧ್ಯಕ್ಷ ನೇಮತ್ ಪಾಶ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡಿಗರು ಕೇವಲ ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ಆಚರಣೆ ಮಾಡಿ ಸುಮ್ಮನಾಗಬಾರದು. ವರ್ಷದ ಎಲ್ಲಾ ದಿನಗಳಲ್ಲಿ ಕನ್ನಡ ಭಾμÁಭಿಮಾನವನ್ನು ಎತ್ತಿ ತೋರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಂಡಳ್ಳಿ ರಾಹಿಲ್ ಬೇಗ್, ಉಪಾಧ್ಯಕ್ಷರಾಗಿ ಶಿವಕುಮಾರ್, ಸದಸ್ಯರಾಗಿ ತಾಜ್, ಸದ್ದಾಂ, ಮುಸವ್ವಿರ್, ಕಾರ್ತಿಕ್, ಶಾಹುಲ್, ನದೀಮ್, ಫಾರೂಕ್, ರಾಹಿಲ್, ಸುಲೇಮಾನ್, ನಾಸಿರ್, ಯೂಸುಫ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಸಮಿ ಶರೀಫ್, ಅಧ್ಯಕ್ಷ ಆರ್. ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಶ, ಜಿಲ್ಲಾ ಸಾಂಸ್ಕøತಿಕ ಘಟಕದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ನಾಗೇಶ್ ನಾಯಕ್, ಅವಿನಾಶ್, ಉಪಾಧ್ಯಕ್ಷ ಅಯಾಜ್, ಪತ್ರಿಕಾ ಕಾರ್ಯದರ್ಶಿ ಮತಿನ್ ಹಾಜರಿದ್ದರು.