ಅಬಕಾರಿ ದಾಳಿ : ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 5.400 ಲೀಟರ್ ಮದ್ಯ ವಶ, ಓರ್ವನ ಬಂಧನ
ಡಿಸೆಂಬರ್ 04, 2022
ಹನೂರು : ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಮೀಪ ಆಣೆಹೊಲ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಓರ್ವನನ್ನು ಬಂಧಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5.400 ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಆಣೆಹೊಲ ಗ್ರಾಮದ ಚಂದ್ರ ಎಂಬಾತನೇ ಬಂಧಿತ ಆರೋಪಿ. ದಾಳಿಯಲ್ಲಿ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕ ಡಿ.ಸುನಿಲ್, ಅಬಕಾರಿ ಉಪ ನಿರೀಕ್ಷಕರಾದ ಸಿದ್ದಯ್ಯ, ಡಿ.ಶ್ರೀಧರ್, ಪೇದೆಗಳಾದ ಕೆ.ಪ್ರದೀಪ್‍ಕುಮಾರ್, ಬಿ.ಸಿದ್ದರಾಜು ಭಾಗವಹಿಸಿದ್ದರು.
0 ಕಾಮೆಂಟ್‌ಗಳು