ನಂಜನಗೂಡಿನಲ್ಲಿ ವಿದ್ಯುತ್ ಅವಘಡ : ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವು
ಡಿಸೆಂಬರ್ 04, 2022
ನಂಜನಗೂಡು : ಲೈನ್ ರಿಪೇರಿ ಮಾಡುತ್ತಿದ್ದ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ನಂಜನಗೂಡು ಟೌನ್ ಮಹದೇಶ್ವರ ಬಡಾವಣೆಯಲ್ಲಿ ಭಾನುವಾರ ಸಂಜೆ ನಡೆದಿದೆ. ತಾಲ್ಲೂಕಿನ ಹೆಡತಲೆ ಗ್ರಾಮದ ಸಿದ್ದರಾಜು ಎಂಬವರ ಪುತ್ರ 24 ವರ್ಷದ ಮಣಿಕಂಠ ಮೃತ ದುರ್ದೈವಿ. ನಂಜನಗೂಡು ಪಟ್ಟಣದಲ್ಲಿ ನಿನ್ನೆಯಿಂದಲೂ ವಿದ್ಯುತ್ ಲೈನ್ ರಿಪೇರಿ ಕಾರ್ಯ ನಡೆಯುತ್ತಿದ್ದು, ಒಂದು ಲೈನ್ ಸಂಪರ್ಕ ಕಡಿತ ಮಾಡಲಾಗಿತ್ತು. ಮತ್ತೊಂದು ಲೈನ್‍ನಲ್ಲಿ ವಿದ್ಯುತ್ ಸಂಪರ್ಕ ಇತ್ತು ಎನ್ನಲಾಗಿದೆ. ದುರದೃಷ್ಟವಶಾತ್ ಮೃತ ಮಣಿಕಂಠ ವಿದ್ಯುತ್ ಸಂಪರ್ಕ ಇದ್ದ ಲೈನ್ ಮುಟ್ಟಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟನು ಎನ್ನಲಾಗಿದೆ.
0 ಕಾಮೆಂಟ್‌ಗಳು