ಸೆನ್ ಕ್ರೈಂ ಪೊಲೀಸರಿಂದ ಮೂವರ ಬಂಧನ: ೪೦ ಸಾವಿರ ರೂ. ಮೌಲ್ಯದ 1 ಕೆ.ಜಿ. 625 ಗ್ರಾಂ ಗಾಂಜಾ ವಶ

ಮೈಸೂರು : ನಗರದ ಸೆನ್ ಕ್ರೈಂ ಪೊಲೀಸರು ನಂಜನಗೂಡು ಊಟಿ ರಸ್ತೆಯ ಕಾಮತ್ ಹೋಟೆಲ್ ಬಳಿಯ ಹರಿಶ್ಚಂದ್ರ ರಸ್ತೆಯಲ್ಲಿ ಮೂವರನ್ನು ಬಂಧಿಸಿ
40 ಸಾವಿರ ರೂ. ಮೌಲ್ಯದ 1 ಕೆ.ಜಿ. 625 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 ಡಿಸಿಪಿ ಪ್ರದೀಪ್ ಗುಂಟಿ ಹಾಗೂ ದೇವರಾಜ ವಿಭಾಗದ ಎಸಿಪಿ ಎಂ.ಎನ್. ಶಶಿಧರ್ ಮಾರ್ಗದರ್ಶನದಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌
ಎನ್‌. ಜಯಕುಮಾರ್ ಮತ್ತು ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು