ಎಸ್‍ಸಿ, ಎಸ್‍ಟಿ ಸಮುದಾಯ ಶಾಸಕ ಡಿಸಿ ತಮ್ಮಣ್ಣರಿಗೆ ಬೆಂಬಲಿಸಲು ಕಾಳಯ್ಯ ಮನವಿ
ಡಿಸೆಂಬರ್ 19, 2022
ಟಿ.ಬಿ.ಸಂತೋಷ, ಮದ್ದೂರು
ಮದ್ದೂರು: ತಾಲ್ಲೂಕಿನಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ನೀಡಿರುವ ಶಾಸಕ ಡಿಸಿ ತಮ್ಮಣ್ಣ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ಜೆಡಿಎಸ್ ಎಸ್ಸಿ, ಎಸ್ಟಿ ವಿಭಾ ಗದ ತಾಲೂಕು ಅಧ್ಯಕ್ಷ ಕಾಳಯ್ಯ ಮನವಿ ಮಾಡಿದರು. ಶಾಸಕ ಡಿಸಿ ತಮ್ಮಣ್ಣ ನೇತೃತ್ವದಲ್ಲಿ ನಡೆದ ತಾಲ್ಲೂಕು ಎಸ್ಸಿ ಎಸ್ಟಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಶಾಸಕರು ದಲಿತ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಅಂಬೇಡ್ಕರ್ ಭವನಗಳ ನಿರ್ಮಾಣ, ಕಾಲೂನಿ ರಸ್ತೆಗಳ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ ಮಾಡಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು. ಶಾಸಕ ಡಿಸಿ ತಮ್ಮಣ್ಣ ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ದಲಿತ ಸಮುದಾಯದ ಅಭಿವೃದ್ಧಿ ಕೆಲಸಗಳನ್ನು ಸಮರ್ಥವಾಗಿ ಮಾಡಿಕೊಂಡು ಬಂದಿದ್ದೇನೆ ಮುಂದೆಯೂ ನಿಮ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ತಾಲೋಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಕರಡಕೆರೆ ಯೋಗೇಶ್, ಚಿಕ್ಕರಸಿನಕೆರೆ ಮೂರ್ತಿ, ಡಿಎ ಕೆರೆ ಮಹೇಂದ್ರ, ಚಾಮನಹಳ್ಳಿ ಮಂಜು, ಮುಡಿನಹಳ್ಳಿ ಶ್ರೀನಿವಾಸ, ಬೋರಯ, ಹೂತಗರೆ ರವಿಕುಮಾರ್, ನವಿಲೇ ರಂಗಸ್ವಾಮಿ, ಪ್ರಸನ್ನ, ಶಿವಲಿಂಗಯ್ಯ, ನವೀನ್, ಅಪ್ಪು ಮುಂತಾದವರು ಉಪಸ್ಥಿತರಿದ್ದರು.