ಎಐಡಿಎಸ್‍ಓ ಸಂಘಟನೆಯಿಂದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ವಾಖುಲ್ಲಾ ಖಾನ್ ಹುತಾತ್ಮ ದಿನ ಆಚರಣೆ

ಇಂದು ನಮ್ಮ ನೆಲದ ಐಕ್ಯತೆಯ ದಿನ-ಎಐಡಿಎಸ್‍ಓ 

ಮೈಸೂರು : ನಗರದ ರಾಮಸ್ವಾಮಿ ವೃತ್ತದ ಬಳಿ ಎಐಡಿಎಸ್‍ಓ ಕಾರ್ಯಕರ್ತರು ಕಾರ್ಯಕ್ರಮ ಸ್ವಾತಂತ್ರ್ಯ ಹೋರಾಟಗಾರರಾದ ರಾಮ್ ಪ್ರಸಾದ್ ಬಿಸ್ಮಿಲ್ ಹಾಗೂ  ಅಶ್ವಾಖುಲ್ಲಾ ಖಾನ್ ಹುತಾತ್ಮ ದಿನ ಆಚರಣೆಯನ್ನು `ನಮ್ಮ ನೆಲದ ಐಕ್ಯತೆಯ ದಿನ’ವಾಗಿ ಆಚರಿಸಿದರು.
ಎಐಡಿಎಸ್‍ಓ ಜಿಲ್ಲಾಧ್ಯಕ್ಷ ಸುಭಾμï ಮಾತನಾಡಿ,
ಡಿಸೆಂಬರ್,19-1927 ರಂದು ನಮ್ಮ ನೆಲದ ಇಬ್ಬರು ಮಹಾನ್ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ವಾಖುಲ್ಲಾ ಖಾನ್ ಅವರು ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಈ ಇಬ್ಬರನ್ನು ಬ್ರಿಟಿಷರು ಗಲ್ಲೆಗೇರಿಸುತ್ತಾರೆ. ದೈವಭಕ್ತ ಹಿಂದೂ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಧರ್ಮ ಶ್ರದ್ಧೆಯುಳ್ಳ ಮುಸಲ್ಮಾನನಾದ ಅಶ್ವಾಖುಲ್ಲಾ ಖಾನ್ ಜೊತೆಗೆ ಗಲ್ಲಿಗೇರಿಸಿದಾಗ ಮಹಾನ್ ಕ್ರಾಂತಿಕಾರಿಯಾದ ಭಗತ್ ಸಿಂಗ್ ಈ ಐಕ್ಯತೆಯ ಭಾರತ ಸ್ವಾತಂತ್ರ್ಯದ ಹೋರಾಟದ ಸಂಕೇತವಾಗಬೇಕು ಎಂದು ಹೇಳಿದ್ದಾರೆ ಎಂಬುದಾಗಿ ಸ್ಮರಿಸಿದರು.
ಆದರೆ, ಪ್ರಸ್ತುತ ನಮ್ಮನ್ನು ಆಳುವ ಸರ್ಕಾರಗಳೇ ಯಾವುದೋ ಒಂದು ಸಣ್ಣ ಕಾರಣ ಸಿಕ್ಕರೆ ಸಾಕು ಜನರ ಜಾತಿ, ಧರ್ಮ, ಭಾμÉ, ಮತ್ತು ಬಹುಮುಖ್ಯವಾಗಿ ಧರ್ಮದ ಹೆಸರಿನಲ್ಲಿ ಒಡೆಯಲು ಪ್ರಯತ್ತಿವೆ. ಇಂತಹ ಸಮಯದಲ್ಲಿ ಈ ಇಬ್ಬರು ಮಹಾನ್ ಚೇತನಗಳ ಬದುಕು, ಸೇವೆ, ಹೋರಾಟ ನಮ್ಮ ದೇಶದಲ್ಲಿ ಇಂದಿಗೂ ಒಂದು ನಿದರ್ಶನವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು ತಾವು ತಮ್ಮ ಮುಂದಿನ ಜೀವನದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ವಾಖುಲ್ಲಾ ಖಾನ್ ಅವರ ಆದರ್ಶಗಳನ್ನು  ಮೈಗೂಡಿಸಿಕೊಳ್ಳುವುದಾಗಿ ಸಂಕಲ್ಪ ಮಾಡಿದರು.
ಮೈಸೂರು ಜಿಲ್ಲಾ ಎಐಡಿಎಸ್‍ಓ ಪದಾಧಿಕಾರಿಗಳಾದ ಅಸಿಯ, ನಿತಿನ್, ಸ್ವಾತಿ, ಹೇಮಾ ವಿದ್ಯಾರ್ಥಿಗಳಾದ ಬಸವ, ಮನೋಹರ್, ಓಂಕಾರ್, ಚಂದನ, ಚಂದ್ರಿಕಾ, ಸುರೇಶ್ ಮುಂತಾದವರು ಇದ್ದರು.