ಉದ್ಯಮಿ ಅಪರಣ ಯತ್ನ : ಐವರ ಬಂಧನ, ಕಾರು, ಬೈಕ್, ಮೊಬೈಲ್ ಫೋನ್‍ಗಳ ವಶ

ಮೈಸೂರು : ಉದ್ಯಮಿಯೊಬ್ದರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವ ದುಷ್ಕರ್ಮಿಗಳ ಯತ್ನವನ್ನು ಎನ್‍ಆರ್ ಪೊಲೀಸರು ವಿಫಲಗೊಳಿಸಿದ್ದು, ಈ ಸಂಬಂಧ ಐದು ಜನರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಒಂದು ಹುಂಡೈ ಕಾರು, ಬೈಕ್ ಮತ್ತು ಮೂರು ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ. 
ಉದ್ಯಮಿಯ ಲಾರಿ ಡ್ರೈವರ್ ಸೇರಿದಂತೆ ಇತರೆ ಆರೋಪಿಗಳು ಮೈಸೂರಿನ ರಿಂಗ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಹತ್ತಿರದ ಸಿಗ್ನಲ್ ಜಂಕ್ಷನ್ ಬಳಿ ಉದ್ಯಮಿಯ ಅಪಹರಣಕ್ಕೆ ಹೊಂಚು ಹಾಕಿದ್ದರು.
ಇದನ್ನು ಗಮನಿಸಿದ ಎನ್‍ಆರ್ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 
ಡಿಸಿಪಿ ಪ್ರದೀಪ್‍ಗುಂಟಿ ಮಾರ್ಗದರ್ಶನ, ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಎನ್‍ಆರ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅಜರುದ್ದೀನ್, ಪಿಎಸ್‍ಐ ಜೈಕೀರ್ತಿ, ಗಂಗಾಧರ್, ಚಂದ್ರಶೇಖರ್ ಇಟಗಿ ಸಿಬ್ಬಂದಿಗಳಾದ ಮಂಜುನಾಥ, ಹೆಚ್.ಎಸ್. ಚೇತನ್, ಮಹೇಶ, ಸುನಿಲ್ ಕುಮಾರ್, ದೊಡ್ಡೇಗೌಡ, ಈರೇಶ ಮತ್ತು ಬಸವರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು