ಸ್ಕೂಟರ್ ಡಿಕ್ಕಿಯಲ್ಲಿ ಜಿಂಕೆ ಚರ್ಮ ಸಾಗಾಟ : ಇಬ್ಬರ ಬಂಧನ ಬೈಕ್, ಮೊಬೈಲ್ ಫೋನ್ ವಶ

ಚಾಮರಾಜನಗರ: ಸ್ಕೂಟರ್ ಡಿಕ್ಕಿಯಲ್ಲಿ ಜಿಂಕೆ ಚರ್ಮವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ತಾಲೂಕಿನ ನರೀಪುರ ಗ್ರಾಮದ ಸಮೀಪ ಪೊಲೀಸರು ಬಂಧಿಸಿದ್ದಾರೆ. 
ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಮೆಕಾನಿಕ್ ಇಫ್ತೆಖಾರ್ ಅಹಮದ್ ಖಾನ್ ಹಾಗೂ ಅಬ್ದುಲ್ ಮುತಾಲಿಕ್ ಬಂಧಿತ ಆರೋಪಿಗಳು. 
ಸ್ಕೂಟರ್ ಡಿಕ್ಕಿಯಲ್ಲಿ ಅಕ್ರಮವಾಗಿ ಜಿಂಕೆ ಚರ್ಮ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳವು ದಾಳಿ ನಡೆಸಿ ಇವರಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಎರಡು ಜಿಂಕೆಗಳ ಚರ್ಮ, ಮೊಬೈಲ್, ಬೈಕ್ ವಶಪಡಿಸಿಕೊಂಡು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು