ಬಿಜೆಪಿ ಸೇರಲು ಕೋರಿಕೆ ಸಲ್ಲಿಸುವ ಫ್ಲೆಕ್ಸ್ ಹಿಡಿದಿದ್ದ ರೌಡಿ ಶೀಟರ್ ಪಾನಿಪೂರಿ ಮಂಜ ಅಂದರ್

ಮೈಸೂರು : ರೌಡಿ ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆ ಸಮರ್ಥಿಸಿ ನನ್ನನ್ನೂ ಹಿಂದೆ ರೌಡಿ ಶೀಟರ್‍ಗೆ ಸೇರಿಸಲಾಗಿತ್ತು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ `ನಾನೂ ರೌಡಿ ಶೀಟರ್ ನನ್ನನ್ನೂ ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಫ್ಲೆಕ್ಸ್ ಹಿಡಿದು ನಿಂತಿದ್ದ ರೌಡಿ ಶೀಟರ್ ಮಂಜು ಅಲಿಯಾಸ್ ಪಾನಿಪೂರಿ ಮಂಜನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ನಗರದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಎದುರು `ಬಿಜೆಪಿಗರೇ ನಾನು ರೌಡಿ ಶೀಟರ್ ನನಗು ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ, ಮಂಜು ಅಲಿಯಾಸ್ ಪಾನಿಪೂರಿ ಮಂಜ’
ಎಂಬ ಬರಹವುಳ್ಳ ಫ್ಲೆಕ್ಸ್ ಹಿಡಿದು ನಿಂತಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಜತೆಗೆ ಮಜುಗರ ಉಂಟು ಮಾಡಿತ್ತು. ಕೂಡಲೇ ಸ್ಥಳಕ್ಕೆ ಕೆ.ಆರ್.ಪೊಲೀಸರು ಧಾವಿಸಿ ಮಂಜನನ್ನು ಬಂಧಿಸಿ ಉದಯಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ. 
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಮಂಜು ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ.
ರೌಡಿ ಶೀಟರ್ ಮಂಜು ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಎದುರು ಹಿಡಿದಿದ್ದ ಫ್ಲೆಕ್ಸ್‍ನಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಸಿದ್ಧಗಂಗಾ ಸ್ವಾಮೀಜಿ, ಶ್ರೀ ಕನಕದಾಸರು, ಶ್ರೀವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳು ಕಂಡುಬಂದವು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು