ಮೈಸೂರು: ನಗರದ ಸಿಸಿಬಿ ಪೊಲೀಸರು ಉದಯಗಿರಿ ಪೊಲೀಸ್ ಠಾಣೆ ಸರಹದ್ದು ರಾಜೀವ ನಗರ ೧ನೇ ಹಂತ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ೨.೫೭೦ ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಯಿಂದ ೩ ಸಾವಿರ ನಗದು ಒಂದು ಮೊಬೈಲ್ ಫೋನ್, ಒಂದು ಹೋಂಡಾ ಆಕ್ಟಿವಾ ದ್ವಿ ಚಕ್ರ ವಾಹನವನ್ನು ಸಹ ಅಮಾನತ್ತು ಮಾಡಿಕೊಂಡಿರುತ್ತಾರೆ. ಈ ಸಂಬAಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
0 ಕಾಮೆಂಟ್‌ಗಳು