ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ ಕಲ್ಕತ್ತಾ, ಮೈಸೂರು ಮೂಲದ ಮಹಿಳೆಯರ ರಕ್ಷಣೆ
ಡಿಸೆಂಬರ್ 13, 2022
ಮೈಸೂರು: ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗುರುಮಲ್ಲೇಶ್ವರ ಬಡಾವಣೆಯಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿ, ಇಬ್ಬರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಬಂದಿತ ಮಹಿಳೆಯು ತನ್ನ ಮನೆಯಲ್ಲಿ ಹೊರ ರಾಜ್ಯದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದು, ಈ ಸಂಬಂಧ ಕಲ್ಕತ್ತಾ ಮೂಲದ ಒಬ್ಬ ಮಹಿಳೆ ಸೇರಿದಂತೆ ಮೈಸೂರಿನ ಒಬ್ಬ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿ, ಬಂಧಿತ ಮಹಿಳೆಯಿಂದ ೩ ಮೊಬೈಲ್ ಫೋನ್, ೨ಸಾವಿರ ನಗದು ಹಣವನ್ನು ಪೊಲೀಸರು ಅಮಾನತ್ತು ಮಾಡಿಕೊಂಡಿದ್ದಾರೆ. ಡಿಸಿಪಿ ಎಂ.ಎಸ್. ಗೀತ, ಎಸಿಪಿ ಸಿ.ಕೆ.ಅಶ್ವತನಾರಾಯಣ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎ.ಮಲ್ಲೇಶ, ಆಲನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಪಿಎಸ್‍ಐ ಪ್ರತಿಭಾ ಜಂಗವಾಡ, ಸಿಬ್ಬಂದಿಗಳಾದ ಆರ್.ರಾಜು, ಎಎಸ್‍ಐ ಕೆ.ಜಿ.ಶ್ರೀನಿವಾಸ್, ರಾಧೇಶ್ ಮತ್ತು ಎನ್.ಜಿ.ಮಮತ ದಾಳಿಯಲ್ಲಿ ಪಾಲ್ಗೊಂಡಿದ್ದರು.
0 ಕಾಮೆಂಟ್‌ಗಳು