ಕನ್ನಡ ಶಾಲೆಗಳು ಖಾಲಿ ಹೊಡೆಯಲು ಸರ್ಕಾರ ಕಾರಣವಲ್ಲ : ಎಡಿಸಿ ಡಾ.ಎಚ್.ಎಲ್. ನಾಗರಾಜು

ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಮಂಡ್ಯ: ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಖಾಲಿ ಹೊಡೆಯುತ್ತಿದೆ.ಇದಕ್ಕೆ ಸರ್ಕಾರ  ಕಾರಣವಲ್ಲ. ಇಂಗ್ಲಿμï ಭ್ರಮೆಯಲ್ಲಿರುವ ನಾವುಗಳೇ ಕಾರಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬೇಸರ ವ್ಯಕ್ತಪಡಿಸಿದರು. 
ಮಂಡ್ಯ ತಾಲ್ಲೂಕು ದುದ್ದ ಗ್ರಾಮದಲ್ಲಿ ಏರ್ಪಡಿಸಿದ್ದ 17ನೇ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಶ್ರಮ ಸಂಸ್ಕøತಿಗೆ ಹೇಳಿ ಮಾಡಿಸಿದಂತಹ ಜಿಲ್ಲೆ ಮಂಡ್ಯ. ಗ್ರಾಮೀಣ ಭಾμÉಯನ್ನು ಹೆಚ್ಚು ಮಾತನಾಡುವ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವುದು ಶ್ಲಾಘನೀಯ. ಭಾμÉ. ಸಂಸ್ಕøತಿಯನ್ನು ಉಳಿಸಲು ಇಂತಹ ಸಮ್ಮೇಳನ ಅತಿಮುಖ್ಯ. ಭಾμÉಯ ತೊಡಕಿನಿಂದಾಗಿ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾμÉಯ ಬಳಕೆ ಆಗಬೇಕು. ಈ ಮೂಲಕ ಚರ್ಚೆ.ಸಂವಾದಗಳನ್ನು ನಡೆಸಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಯಾರೊಟ್ಟಿಗೆ ರಾಜಿಯಾಗದೇ ಕನ್ನಡ ಭಾμÉ ಹಾಗೂ ಈ ನಾಡನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು. ಮಂಡ್ಯದಲ್ಲಿ ಕನ್ನಡಕ್ಕೆ ಕೊರತೆಯಿಲ್ಲ. ಆದರೆ ಬೆಂಗಳೂರಿನಲ್ಲಿ ಆ ಕೊರತೆ ಇದೆ. ಕನ್ನಡದ ಕಾಂತಾರ ಚಿತ್ರ ದುಬೈಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನವಾಗುತ್ತಿದೆ. ಈ ಸಂದರ್ಭದಲ್ಲಿ ತಾನು ಭಾಗವಹಿಸಿದ್ದು ಖುಷಿ ವಿಚಾರ. ಅಮೇರಿಕಾದಂತಹ ದೇಶದಲ್ಲಿ ಅನಿವಾಸಿ ಕನ್ನಡಿಗರು ಕನ್ನಡಕ್ಕೆ ತಮ್ಮದೇ ಆದ ಪ್ರಾಮುಖ್ಯತೆಯನ್ನು ತಂದು ಕೊಟ್ಟಿದ್ದಾರೆ ಇದು ಶ್ಲಾಘನೀಯ. ಇನ್ನು ಸ್ವಲ್ಪ ದಿನದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ ಈಗಾಗಲೇ  ಮಹಾರಾಷ್ಟ್ರದ ಗಡಿಯಲ್ಲಿ ಹಲವು ಕಿತಾಪತಿಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ನಾಡು ನುಡಿ ಉಳಿವಿಗಾಗಿ ಹೋರಾಟ ಮಾಡುತ್ತೇವೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜುರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ತಾಲ್ಲೂಕು ಸಮ್ಮೇಳನ ನಡೆಯುತ್ತಿದೆ. ಕನ್ನಡಾಭಿಮಾನಿಗಳು ಸಮ್ಮೇಳನದ ಗೋಷ್ಠಿಗಳು ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಗೌರವ ತರುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ್, ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ, ನಗರ ಅಧ್ಯಕ್ಷೆ ಸುಜಾತ ಕೃಷ್ಣ, ಗ್ರಾ.ಪಂ ಅಧ್ಯಕ್ಷೆ ಸೌಭಾಗ್ಯ ಇತರರಿದ್ದರು.

ʻಯಾವುದು ನಮಗೆ ಹಿತವನ್ನು ನೀಡುತ್ತದೋ ಅದಲ್ಲೆವೂ ಸಾಹಿತ್ಯವೇ ಆಗಿದೆ. ಇಲ್ಲಿರುವ ಎಲ್ಲರೂ ಸಾಹಿತ್ಯ ಅಭಿಯಾನಿಗಳೆ ಆಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಕಲಿತ ಕನ್ನಡದ ಪದ್ಯವನ್ನು ನಾವು ಮರೆಯುವಂತಿಲ್ಲ. ಇದರಿಂದ ಕನ್ನಡದ ಅಳಿವು ಎಂದಿಗೂ ಸಾಧ್ಯವಿಲ್ಲ. ಸಾಹಿತ್ಯ ಎಂಬುದು ಎಲ್ಲರ ಎದೆಯಲ್ಲಿದೆ. ಸಾಹಿತ್ಯಕ್ಕೆ ವೇದಿಕೆ ಕಲ್ಪಿಸಿ ವಿರಾಜಮಾನವಾಗಿದೆʼ
ಡಾ.ಲೀಲಾ ಅಪ್ಪಾಜಿ, ಸಮ್ಮೇಳನಾಧ್ಯಕ್ಷರು 

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ
17ನೇ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರಕಿತು. ಸಮ್ಮೇಳನಾಧ್ಯಕ್ಷೆ ಡಾ.ಲೀಲಾ ಅಪ್ಪಾಜಿ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಈ ವೇಳೆ ವಿವಿಧ ಜಾನಪದ ಕಲಾತಂಡಗಳು ಮೇಳೈಸಿದವು. ಜತೆಗೆ ಎಲ್ಲೆಲ್ಲೂ ಕನ್ನಡ ಬಾವುಟಗಳು ರಾರಾಜಿಸಿದವು. ತಮಟೆ, ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು