ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಕರವೇ ಮುಖಂಡ
ಸೋಮವಾರಪೇಟೆ: ಅನಾರೋಗ್ಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕರವೇ ಕಾರ್ಯಕರ್ತರೊಬ್ಬರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಶನಿವಾರ ಸಂತೆ ಹೋಬಳಿಗೆ ಸೇರಿದ ಬಿದಿರೂರು ಹೊಸ ಕಾಲೋನಿ ನಿವಾಸಿ ರಾಜು ಎಂಬವವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 3 ದಿನಗಳಿಂದ ಶನಿವಾರ ಸಂತೆಯ ರಸ್ತೆ ಬದಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ಇದನ್ನು ಗಮನಿಸಿದ ಶನಿವಾರಸಂತೆಯ ಹೋಟೆಲ್ ಯೋಗಣ್ಣ ಎಂಬವರು ಕೂಡಲೇ ಆಪತ್ಬಾಂಧವ ಎನಿಸಿರುವ ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿʼಸೋಜ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ತಕ್ಷಣ ಇದಕ್ಕೆ ಸ್ಪಂದಿಸಿದ ಪ್ರಾನ್ಸಿಸ್, ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ, ರಾಜು ಅವರನ್ನು ಶನಿವಾರಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲು ನೆರವಾದರು.
ಈ ಸಂದರ್ಭದಲ್ಲಿ ರಾಜು ಅವರ ಬಟ್ಟೆಗಳು ಮಲ, ಮೂತ್ರದಿಂದ ಗಲೀಜಾಗದ್ದವು. ಪ್ರಾನ್ಸಿಸ್ ತಮ್ಮ ಗೆಳೆಯರೊಡಗೂಡಿ ರಾಜು ಅವರ ಬಟ್ಟೆ ಬದಲಾಯಸಿ ಬೇರೆ ಬಟ್ಟೆಯನ್ನು ತೊಡಿಸಿದರು. ಕರೆಗೆ ಸ್ಪಂದಿಸಿ ತಕ್ಷಣ ಆಂಬುಲೆನ್ಸ್ ತಂದ 108 ಸಿಬ್ಬಂದಿಗಳು, ಉತ್ತಮ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರಿಗೂ ಹಾಗೂ ರಾಜು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ಕೃಷ್ಣ, ಮಂಜು ಹಾಗೂ ವೀರೇಶ್ ಅವರಿಗೂ ಪ್ರಾನ್ಸಿಸ್ ಡಿʼಸೋಜಾ ಅಭಿನಂದನೆ ಸಲ್ಲಿಸಿದರು.
ಅನಾರೋಗ್ಯದಂದ ಬಳಲುತ್ತಿರುವ ಯಾವುದೇ ಅನಾಥ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ತಮ್ಮ 9449255831 ಮತ್ತು 9686095831 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಫ್ರಾನ್ಸಿಸ್ ಡಿಸೋಜಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
0 ಕಾಮೆಂಟ್‌ಗಳು